ಡಿವಿಜಿ ಸುದ್ದಿ, ದಾವಣಗೆರೆ: ದಾವಣಗೆರೆ ಜಿಲ್ಲೆಯ 108 ತುರ್ತು ವಾಹನಗಳ ದುರಸ್ತಿ ಮಾಡಿಸಲು ಅವಶ್ಯವಿರುವ ಆಟೋಮೊಬೈಲ್ಸ್ ಮತ್ತು ವರ್ಕ್‍ಶಾಪ್ ತೆರೆಯಲು ಜಿಲ್ಲಾಧಿಕಾರಿ ಷರತ್ತು ವಿಧಿಸಿ ಅನುಮತಿ ನೀಡಿದ್ದಾರೆ.
ಹರಿಹರ ರಸ್ತೆಯ ಮಹಾಲಕ್ಷ್ಮಿ ಆಟೋಮೊಬೈಲ್ಸ್, ಎಸ್.ಎಸ್.ಕೆ.ಗ್ಯಾರೇಜ್, ಇದಾಯತ್ ಗ್ಯಾರೇಜ್, ಪಿ.ಬಿ. ರಸ್ತೆಯ ಮೆ|| ಮಲ್ಲಿಕಾರ್ಜುನ ಸೇಲ್ಸ್ & ಸರ್ವಿಸ್, ಶಾಮನೂರು ರಸ್ತೆಯ ಲಕ್ಷ್ಮೀ ಪಂಚರ್ ಶಾಪ್ , ಹರಿಹರದ ಸದರನ್ ಗ್ಯಾಸ್ ಏಜೆನ್ಸಿ ಆಟೋಮೊಬೈಲ್ಸ್ ಮತ್ತು ವರ್ಕ್‍ಶಾಪ್‍ಗಳನ್ನು ತೆರೆಯಲು ಅನುಮತಿ ನೀಡಲಾಗಿದೆ.
ಷರತ್ತುಗಳು : ಪರಿಶುದ್ದತೆ, ನೈರ್ಮಲ್ಯ, ಅಗತ್ಯ ಸುರಕ್ಷಣಾ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಸ್ಯಾನಿಟೈಸರ್ ಬಳಕೆ ಕಡ್ಡಾಯವಾಗಿರುತ್ತದೆ. ಕೆಲಸ ನಿರ್ವಹಿಸುವವರೆಲ್ಲರೂ ಕಡ್ಡಾಯವಾಗಿ ಮಾಸ್ಕ್‍ಗಳನ್ನು ಧರಿಸತಕ್ಕದ್ದು ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳತಕ್ಕದ್ದು.
ಮಾಲೀಕರುಗಳು ಸೇರಿದಂತೆ ಆಟೋಮೊಬೈಲ್/ಗ್ಯಾರೇಜ್ ಕೆಲಸಗಾರರಿಗೆ ಕೆಮ್ಮು, ಶೀತ, ಜ್ವರದ ಲಕ್ಷಣ ಕಂಡುಬಂದಲ್ಲಿ ಕೂಡಲೇ ಆರೋಗ್ಯ ಇಲಾಖೆಗೆ ತಿಳಿಸಬೇಕು.ಕುಡಿಯಲು ಬಿಸಿ ನೀರಿನ ವ್ಯವಸ್ಥೆ ಮಾಡಬೇಕು. ಶೌಚಾಲಯಗಳಲ್ಲಿ ಸ್ಯಾನಿಟೈಸರ್/ಸೋಪ್ ವ್ಯವಸ್ಥೆ ಮಾಡಬೇಕು.
ಮೇಲ್ಕಂಡ ಷರತ್ತುಗಳನ್ನು ಉಲ್ಲಂಘಿಸುವವರ ಮೇಲೆ ಭಾರತೀಯ ದಂಡ ಸಂಹಿತೆಯ ಕಲಂ 188 ಮತ್ತು ವಿಪತ್ತು ನಿರ್ವಹಣಾ ಕಾಯ್ದೆ 2005 ರ ಸೆಕ್ಷನ್ 51 ರಿಂದ 60 ರವರೆಗೆ ಕಾನೂನುಗಳನ್ವಯ ಕ್ರಮ ಜರುಗಿಸಲಾಗುವುದೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿಗಾಗಿ ವಾಟ್ಸಾಪ್ : 7483892205
ಇಮೇಲ್: dvgsuddi@gmail.com