ಡಿವಿಜಿ ಸುದ್ದಿ, ದಾವಣಗೆರೆ: ನಗರದ ಮಂಡಿಪೇಟೆಯ ಕಲ್ಯಾಣ್ ಜ್ಯುವೆಲರ್ಸ್ ಶಾಪ್ ನಲ್ಲಿ ಕಳ್ಳರು ಕೈಚಳಕ ತೋರಿಸಿದ್ದು, ನಕಲಿ ಚಿನ್ನ ಇಟ್ಟು , 1.43 ಲಕ್ಷದ ಚಿನ್ನಾಭರಣ ಎಸ್ಕೇಪ್ ಮಾಡುದ್ದಾರೆ.
ಇತ್ತೀಚೆಗೆ ಚಿನ್ನ ಖರೀದಿಗೆ ಬಂದಿದ್ದ ಮೂವರು, ಕೌಂಟರ್ ಬಳಿ ಹೋಗಿ ಚಿನ್ನದ ಸರ ರೇಟ್ ಕೇಳಿದ್ದಾರೆ. ಚಿನ್ನವನ್ನು ಹಾಕಿಕೊಂಡು ನೋಡುವ ನೆಪದಲ್ಲಿ ಒಬ್ಬರ ಕೊರಳಿಗೆ ಹಾಕಿದ್ದಾರೆ. ಈ ವೇಳೆ ಅಂಗಡಿಯವರ ಗಮನ ಬೇರೆ ಕಡೆ ಸೆಳೆದು ಮೊದಲೇ ಕೊರಳಿನಲ್ಲಿದ್ದ ನಕಲಿ ಸರವನ್ನು ವಾಪಸ್ ನೀಡಿದ್ದಾರೆ. ಇದು ಅಂಗಡಿ ಅವರಿಗೆ ತಕ್ಷಣ ಗೊತ್ತಾಗಿಲ್ಲ.
ಮರು ದಿನ ಅಂಗಡಿಯಲ್ಲಿನ ಚಿನ್ನವನ್ನು ಸ್ಕ್ಯಾನ್ ಮಾಡುವಾಗ ನಕಲಿ ಸರ ಇರುವುದು ಪತ್ತೆಯಾಗಿದ್ದು, ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.



