Connect with us

Dvg Suddi-Kannada News

ದಾವಣಗೆರೆ: ಕೋವಿಡ್ ಮಾರ್ಗಸೂಚಿ ಪ್ರಕಾರ ಮೃತ ವೃದ್ಧನ ಅಂತ್ಯಕ್ರಿಯೆ; ಜಿಲ್ಲಾಧಿಕಾರಿ

ಪ್ರಮುಖ ಸುದ್ದಿ

ದಾವಣಗೆರೆ: ಕೋವಿಡ್ ಮಾರ್ಗಸೂಚಿ ಪ್ರಕಾರ ಮೃತ ವೃದ್ಧನ ಅಂತ್ಯಕ್ರಿಯೆ; ಜಿಲ್ಲಾಧಿಕಾರಿ

ಡಿವಿಜಿ ಸುದ್ದಿ, ದಾವಣಗೆರೆ : ಜಿಲ್ಲೆಯಲ್ಲಿ ಮೊದಲ ಬಲಿಯಾದ ವೃದ್ಧನ ಅಂತ್ಯಕ್ರಿಯೆಯನ್ನು ಇಂದು ಬೆಳಗಿನಜಾವ 3.45ಕ್ಕೆ ಕೋವಿಡ್  ಮಾರ್ಗಸೂಚಿ ಪ್ರಕಾರ ಅಂತ್ಯಕ್ರಿಯೆ ನಡೆಸಲಾಯಿತು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾಹಿತಿ ನೀಡಿದರು.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾಲಿನಗರ ನಿವಾಸಿದ  69 ವರ್ಷದ ವೃದ್ಧ ನಿನ್ನೆ ರಾತ್ರಿ  9.00 ಗಂಟೆಗೆ ಮೃತಪಟ್ಟಿದ್ದು,  ಮೃತರ ಶವಸಂಸ್ಕಾರವನ್ನು ಬೆಳಗ್ಗೆ 3.45 ಕ್ಕೆ ಜಿಲ್ಲಾಡಳಿತ ಕೋವಿಡ್ ನಿಯಮದ ಪ್ರಕಾರ ನೆರವೇರಿಸಿದೆ. ಶವನ್ನು ಯಾರು ಕೂಡ ಮುಟ್ಟದಂತೆ ಮುಂಜಾಗೃತಿ ವಹಿಸಿ ಅಂತ್ಯಕ್ರಿಯೆ ಮಾಡಲಾಗಿದೆ ಎಂದು ತಿಳಿಸಿದರು.

ವೃದ್ಧ ಏ. 28 ರಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು, ಏ.29 ರಂದು ವರದಿಯಲ್ಲಿ ಪಾಸಿಟಿವ್ ಬಂದಿತ್ತು. ಆದರೆ, ವೃದ್ಧನಿಗೆ ಉಸಿರಾಟದ ತೊಂದರೆ, ಸಕ್ಕರೆ ಕಾಯಿಲೆ ಇತ್ತು. ಈತ ಕಳೆದ 5 ವರ್ಷದಿಂದ ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಮಾಹಿತಿ ನೀಡಿದರು.

ವೃದ್ಧನ ಕುಟುಂಬದ ಐವರು ಸದಸ್ಯರಿಗೆ ಪಾಸಿಟಿವ್ ಬಂದಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕಟುಂಬದವರು ಯಾರು ಕೂಡ ಅಂತ್ಯ ಕ್ರಿಯೆಯಲ್ಲಿ ಪಾಲ್ಗೊಳ್ಳಲಾರದಂತಹ ಹೀನಾಯ ಸ್ಥಿತಿ ನಿರ್ಮಾಣವಾಗಿದೆ.

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

News

Advertisement
Advertisement e

ಸಿದ್ದನೂರು ಮತ್ತು ಅಗಸನಕಟ್ಟೆಯ ನಿಕ್ರಾ ಯೋಜನೆಯ ದೃಶ್ಯಾವಳಿ

Advertisement
To Top