ಡಿವಿಜಿ ಸುದ್ದಿ, ದಾವಣಗೆರೆ: ಕಳೆದ 28 ದಿನದಲ್ಲಿ ಯಾವುದೇ ಪಾಸಿಟಿವ್ ಪ್ರಕರಣ ಪತ್ತೆಯಾಗದ ಹಿನ್ನೆಲೆ ಗ್ರೀನ್ ಝೋನ್ ಗೆ ಶಿಫ್ಟ್ ಆಗಿದ್ದ ದಾವಣಗೆರೆಯಲ್ಲಿ ಇಂದು ಮತ್ತೊಂದು ಹೊಸ ಪ್ರಕರಣ ಪತ್ತೆಯಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಮತ್ತೆ ಕೊರೊನಾ ಆತಂಕ ಮನೆ ಮಾಡಿದೆ.
https://www.facebook.com/permalink.php?story_fbid=227290225364527&id=105586904201527
ನಗರದ ಭಾಷಾನಗರ ನಿವಾಸಿಯಾಗಿರುವ 35 ವರ್ಷದ ನರ್ಸ್ ಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಕಳೆದೆರಡು ದಿನಗಳ ಹಿಂದೆ ನರ್ಸ್ ಅನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಕೊರೊನಾ ವೈರಸ್ ಪತ್ತೆಗಾಗಿ ಗಂಟಲು ದ್ರವನ್ನು ಶಿವಮೊಗ್ಗದ ಲ್ಯಾಬ್ ಕಳುಹಿಸಲಾಗಿತ್ತು. ಪುಣೆ ಲ್ಯಾಬ್ ನಲ್ಲಿಯೂ ಪಾಸಿಟಿವ್ ಬಂದಿದೆ. ವರದಿಯಲ್ಲಿ ಭಾಷಾ ನಗರದ ನಿವಾಸಿಗೆ ಪಾಸಿಟಿವ್ ಆಗಿರುವುದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಭಾಷಾನಗರ ಸೀಲ್ ಡೌನ್
ನಿನ್ನೆಯಷ್ಟೇ ದಾವಣಗೆರೆ ಗ್ರೀನ್ ಝೋನ್ ಗೆ ಬಂದಿದ್ದರಿಂದ ಕೆಲವು ಷರತ್ತುಗಳನ್ನು ವಿಧಿಸಿ ಅಂಗಡಿ ಮುಗ್ಗಟು ತೆರೆಯಲು ಅವಕಾಶ ನೀಡಲಾಗಿತ್ತು. ಇದೀಗ ಭಾಷಾನಗರದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದರಿಂದ ಭಾಷಾನಗರ, ಅಜಾದ್ ನಗರ, ಮಿಲತ್ ಕಾಲೋನಿ ಗಳನ್ನು ಜಿಲ್ಲಾಡಳಿತ ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ. ಈ ಪ್ರದೇಶದಲ್ಲಿ ಒಂದು ಕಡೆ ಮಾತ್ರ ಒಳ ಹೋಗಲು ಮತ್ತು ಹೊರ ಬರಲು ಅವಕಾಶ ಕಲ್ಪಿಸಲಾಗುವುದು. ಇಲ್ಲಿನ ನಿವಾಸಿಗಳು ಯಾರು ಕೂಡ ಮನೆಯಿಂದ ಹೊರ ಬರುವಂತಿಲ್ಲ. ಇಡೀ ಪ್ರದೇಶವನ್ನು ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ ಎಂದು ತಿಳಿಸಿದರು.
ಭಾಷಾನಗರಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಯಾರಿಂದ ವೈರಸ್ ಬಂದಿದೆ ಎಂಬುದು ಬಗ್ಗ ಇನ್ನಷ್ಟೇ ಪತ್ತೆಯಾಗಬೇಕಿದೆ. ನರ್ಸ್ ಜೊತೆ ಪತಿ ಹಾಗೂ ಇಬ್ಬರು ಪುತ್ರ ವಾಸವಿದ್ದು, ಇಡೀ ಕುಟುಂಬವನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. 20 ಜನರ ಜೊತೆ ಸಂಪರ್ಕ ಹೊಂದಿದ್ದ ಬಗ್ಗೆ ಮಾಹಿತಿ ಬಂದಿದೆ. ಏ23 ರಂದು ನರ್ಸ್ ಒಂದು ಹರಿಗೆಯನ್ನು ಕೂಡ ಮಾಡಿಸಿದ್ದು, ಆ ಮಹಿಳೆಯನ್ನು ಕೂಡ ಐಸೋಲೇಷನ್ ವಾರ್ಡ್ ನಲ್ಲಿ ಇಡಲಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ಕರೆದಿದ್ದ ಸಭೆಯಲ್ಲಿಯೂ ಈ ನರ್ಸ್ ಭಾಗಿಯಾಗಿದ್ದರು ಎಂಬುದ ಬಗ್ಗೆ ಮಾಹಿತಿ ಇದೆ. ಹೀಗಾಗಿ ಅವರು ಯಾರ ಜೊತೆ ಸಂಪರ್ಕ ಹೊಂದಿದವರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ತಿಳಿಸಿದರು.



