ಡಿವಿಜಿ ಸುದ್ದಿ, ದಾವಣಗೆರೆ: ಕೇಂದ್ರ ಸರ್ಕಾರ ಕೊರೊನಾ ವೈರಸ್ ವಲಯವಾರು ನೂತನ ಪಟ್ಟಿ ಬಿಡುಗಡೆ ಮಾಡಿದ್ದು, ದಾವಣಗೆರೆ ಜಿಲ್ಲೆಯಲ್ಲಿ ಹೊಸದಾಗಿ ಎರಡು ಪ್ರಕರಣ ದಾಖಲಾಗಿದ್ದರೂ, ಗ್ರೀನ್ ಝೋನ್ ನಲ್ಲಿಯೇ ಮುಂದುವರಿದಿದೆ.
ಪರಷ್ಕೃತ ಪಟ್ಟಿಯನ್ನು ಕರ್ನಾಟಕದ ರೆಡ್ ಝೋನ್ ಜಿಲ್ಲೆಗಳ ಸಂಖ್ಯೆ 6ರಿಂದ 3ಕ್ಕೆ ಇಳಿಕೆ ಕಂಡಿದೆ.ಕಳೆದ ವಾರದ ಕೊರೊನಾ ಸಂಖ್ಯೆ ಆಧರಿಸಿ ಈ ಪರಷ್ಕೃತ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಈ ಹಿಂದೆ ಕೆಂಪು ಪಟ್ಟಿಯಲ್ಲಿದ್ದ ಕಲಬುರಗಿ, ಬೆಳಗಾವಿ, ಚಿಕ್ಕಬಳ್ಳಾಪುರವನ್ನು ಕೇಂದ್ರ ಸರ್ಕಾರ ಕೈಬಿಟ್ಟಿದೆ.
ದಾವಣಗೆರೆಯಲ್ಲಿ ಕಳೆದ 30 ದಿನಗಳಿಂದ ಯಾವುದೇ ಪ್ರಕರಣ ಪತ್ತೆಯಾಗಿರಲಿಲ್ಲ. ಹೀಗಾಗಿ ಗ್ರೀನ್ ಝೋನ್ ನಲ್ಲಿತ್ತು. ಆದರೆ, ಏ. 29 ರಂದು ಒಂದೇ ದಿನ ಏರಡು ಪ್ರಕರಣ ಪತ್ತೆಯಾಗುವ ಮೂಲಕ ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ. ಮತ್ತೆ ದಾವಣಗೆರೆ ಆರೆಂಜ್ ಝೋನ್ ಗೆ ಹೋಗುತ್ತೆ ಎನ್ನಲಾಗುತ್ತಿತ್ತು. ಆದರೆ, ಕೇಂದ್ರ ಸರ್ಕಾರ ಇಂದು ಬಿಡುಗಡೆ ಮಾಡಿದ ಪಟ್ಟಿಯಲ್ಲಿ ದಾವಣಗೆರೆ ಗ್ರೀನ್ ಝೋನ್ ನಲ್ಲಿಯೇ ಮುಂದುವರಿದಿದೆ.

ರಾಜ್ಯದ ವಲಯವಾರು ಪಟ್ಟಿ
ಕೆಂಪು ವಲಯ: ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮೈಸೂರು ಮಾತ್ರ ರೆಡ್ ಝೋನ್‍ನಲ್ಲಿವೆ. ಈ ಹಿಂದೆ ಕೆಂಪು ಪಟ್ಟಿಯಲ್ಲಿದ್ದ ಕಲಬುರಗಿ, ಬೆಳಗಾವಿ, ಚಿಕ್ಕಬಳ್ಳಾಪುರವನ್ನು ಕೇಂದ್ರ ಸರ್ಕಾರ ಕೈಬಿಟ್ಟಿದೆ. ಅತಿ ಹೆಚ್ಚು ಕೊರೊನಾ ಪ್ರಕರಣಗಳು ಬೆಳಕಿಗೆ ಬರದ ಹಿನ್ನೆಲೆ ಈ ಪಟ್ಟಿಯಿಂದ ಮೂರು ಜಿಲ್ಲೆಗಳನ್ನು ಕೈಬಿಡಲಾಗಿದೆ.
ಕಿತ್ತಳೆ ವಲಯ:ಬೆಳಗಾವಿ, ವಿಜಯಪುರ, ಕಲಬುರಗಿ, ಬಾಗಲಕೋಟೆ, ಮಂಡ್ಯ, ಬಳ್ಳಾರಿ, ಧಾರವಾಡ, ದಕ್ಷಿಣ ಕನ್ನಡ, ಬೀದರ್, ಚಿಕ್ಕಬಳ್ಳಾಪುರ, ಗದಗ, ಉತ್ತರ ಕನ್ನಡ, ತುಮಕೂರು. ಕಳೆದ 14 ದಿನಗಳಿಂದ ಯಾವುದೇ ಪ್ರಕರಣ ಬಾರದೇ ಇದ್ದರೆ ಅಥವಾ ಕಡಿಮೆ ಪಾಸಿಟಿವ್ ಪ್ರಕರಣ ಬಂದಿದ್ದರೆ ಈ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತದೆ.
ಹಸಿರು ವಲಯ:ದಾವಣಗೆರೆ, ಉಡುಪಿ, ಚಾಮರಾಜನಗರ, ಚಿಕ್ಕಮಗಳೂರು, ಕೊಡಗು, ಚಿತ್ರದುರ್ಗ, ಹಾಸನ, ಹಾವೇರಿ, ಕೋಲಾರ, ಕೊಪ್ಪಳ, ರಾಯಚೂರು, ರಾಮನಗರ, ಶಿವಮೊಗ್ಗ, ಯಾದಗಿರಿ. ಯಾವುದೇ ಕೊರೊನಾ ಪ್ರಕರಣಗಳು ಪತ್ತೆಯಾಗದ ಜಿಲ್ಲೆಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತದೆ.
Union Health Secry Preeti Sudan writes to Chief Secys of all states/UTs, designating dists across all states/UTs as Red, Orange & Green Zones.
Since recovery rates have gone up, distritcs are now being designated across various zones duly broad-basing the criteria: Preeti Sudan pic.twitter.com/WjVZPJXl5q
— ANI (@ANI) May 1, 2020
ರೆಡ್ ಝೋನ್‍ನಲ್ಲಿ ಪ್ರತಿ ಮನೆಯ ಮೇಲೂ ಸ್ಥಳೀಯ ಆಡಳಿತ ಕಣ್ಣಿಟ್ಟರಬೇಕು. ಈ ಹಿಂದೆ ನಿಗದಿಪಡಿಸಿದ್ದ 28 ದಿನಗಳ ಬದಲು 21 ದಿನಗಳ ಕಾಲ ಸೋಂಕು ಕಾಣಿಸಿಕೊಳ್ಳದಿದ್ದರೇ ಗ್ರೀನ್ ಝೋನ್ ಅಂತ ಘೋಷಿಸಬಹುದು ಎಂದು ಕೇಂದ್ರ ಆರೋಗ್ಯ ಇಲಾಖೆಯು ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.



