ಡಿವಿಜಿ ಸುದ್ದಿ, ದಾವಣಗೆರೆ: ನಗರದ ಜಾಲಿ ನಗರ ನಿವಾಸಿಯಾದ ವೃದ್ಧನಿಗೆ ಏ. 29 ರಂದು ಕೊರೊನಾ ಪಾಸಿಟಿವ್ ಪತ್ತೆಯಾಗಿತ್ತು. ಇಂದು ಅದೇ ವೃದ್ಧನ ಕುಟುಂಬದ 5 ಜನ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ. ಯಾವುದೇ ವಿದೇಶಿ ಪ್ರಯಾಣ, ಟ್ರಾವಲ್ ಹಿಸ್ಟರಿ ಇಲ್ಲದಿದ್ದರೂ, ವೃದ್ಧನಿಗೆ ವೈರಸ್ ಹೇಗೆ ಬಂದಿದೆ ಎಂಬುದು ಜಿಲ್ಲಾಡಳಿತಕ್ಕೆ ದೊಡ್ಡ ತಲೆ ನೋವಾಗಿದೆ. ಹೀಗಾಗಿ ವೃದ್ಧನ ನಿವಾಸದ ಸುತ್ತಮುತ್ತ ಇರುವ ನಿವಾಸಿಗಳನ್ನು ಮಾದರಿ ಪರೀಕ್ಷೆಗೆ ಒಳಪಡಿಸಲು ಜಿಲ್ಲಾಡಳಿತ ನಿರ್ಧರಿಸಿದೆ.
https://www.facebook.com/permalink.php?story_fbid=228734621886754&id=105586904201527
ಇಂದು ವೃದ್ಧನ ಕುಟುಂಬದ 31, 24, 18 ವರ್ಷದ ಸೊಸೆಯಂದಿರು, 24 ವರ್ಷದ ಮಗ ಹಾಗೂ ಒಂದು ವರ್ಷದ ಮಗುವಿಗೆ ಕೊರೊನೊ ಪಾಸಿವ್ ಪತ್ತೆಯಾಗಿದೆ. ಇದರಿಂದ ಒಂದೇ ಕುಟುಂಬದ 6 ಮಂದಿಗೆ ಕೊರೊನಾ ಪಾಸಿವ್ ಬಂದಂತಾಗಿದೆ.
ಇಂದು ಕೂಡ ವೃದ್ಧನ ಸುತ್ತಮುತ್ತ ಜಾಲಿನಗರ ಮತ್ತು ಭಾಷಾನಗರ ಸೇರಿ 80 ಜನರನ್ನು ಮಾದರಿ ಪರೀಕ್ಷೆ ಮಾಡಲಾಗಿದ್ದು, ಸಂಜೆ ಇನ್ನಷ್ಟು ಜನರನ್ನು ಮಾದರಿ ಪರೀಕ್ಷೆಗೆ ಕಳುಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಮಾಹಿತಿ ನೀಡಿದರು.
ಈ ಮೂಲಕ ಗ್ರೀನ್ ಝೋನ್ ನಲ್ಲಿದ್ದ ದಾವಣಗೆರೆ ಕೇವಲ ಮೂರು ದಿನಗಳ ಅಂತರದಲ್ಲಿ 8 ಪ್ರಕರಣಗಳು ಪತ್ತೆಯಾಗಿವೆ. ಅದರಲ್ಲೂ ಹಳೇ ದಾವಣಗೆರೆ ಭಾಗದಲ್ಲಿ 8 ಪ್ರಕಣಗಳು ದಾಖಲಾಗಿದ್ದು, ಭಾಷಾ ನಗರ ಮತ್ತು ಜಾಲಿನಗರವನ್ನು ಸಂಪೂರ್ಣವಾಗಿ ಸೀಲ್ ಡೌನ್ ಮಾಡಲಾಗಿದೆ. ಇಲ್ಲಿನ ಜನರಲ್ಲಿ ಇನ್ನಷ್ಟು ಆತಂಕ ಹೆಚ್ಚಾಗಿದ್ದು, ಸಮೂಹ ಹಂತಕ್ಕೆ ಬಂದಿದೆಯಾ ಎನ್ನುವ ಅನುಮಾನ ಕಾಡುವಂತಾಗಿದೆ.



