ಡಿವಿಜಿ ಸುದ್ದಿ, ದಾವಣಗೆರೆ: ನಗರದ ಶಿವನಗರ ನಿವಾಸಿಯೊಬ್ಬ ಅಜ್ಮೀರ್ ಪ್ರವಾಸದಿಂದ ಬಂದ ವ್ಯಕ್ತಿಯಲ್ಲಿ ಕೊರೊನಾ ವೈರಸ್ ಪಾಸಿಟಿವ್ ಪತ್ತೆಯಾಗಿತ್ತು. ಈ ಹಿನ್ನಲೆ ಶಿವನಗರ ಹೊಸದಾಗಿ ಕಂಟೈನ್ ಮೆಂಟ್ ಝೋನ್ ಆಗಿದೆ. ಹೀಗಾಗಿ ಇಂದು ಈ ಪ್ರದೇಶವನ್ನು ಸೀಲ್ ಡೌನ್ ಮಾಡಲು ಬಂದ ಅಧಿಕಾರಿಗಳನ್ನು ತಡೆದು, ಸೀಲ್ ಡೌನ್ ವಿರೋಧಿಸಿದರು. ಆಗ ನಿವಾಸಿಗಳ ಮನವೊಲಿಸಿದ ಮೇಯರ್ ಅಜಯ್ ಕುಮಾರ್ ಸೀಲ್ ಡೌನ್ ಗೆ ಅವಕಾಶ ಕಲ್ಪಿಸಿಕೊಟ್ಟರು.
ಜಿಲ್ಲಾಧಿಕಾರಿಗಳು, ಪೋಲಿಸ್ ವರಿಷ್ಠಾಧಿಕಾರಿಗಳು ಮತ್ತು ಪಾಲಿಕೆ ಆಯುಕ್ತರು ಸೀಲ್ ಡೌನ್ ಗೆ ತೆರಳಿದ ಸಂದರ್ಭದಲ್ಲಿ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದರು.

ಈ ವೇಳೆ ಸ್ಥಳೀಯರಿಗೆ ಜಿಲ್ಲಾಧಿಕಾರಿ, ಮೇಯರ್ ಅಜಯ್ ಕುಮಾರ್ ತಿಳಿ ಹೇಳಿದರು. ಸೀಲ್ ಡೌನ್ ನಿಂದ ಯಾವುದೇ ತೊಂದರೆ ಆಗದಂತೆ ಸರ್ಕಾರದ ನೋಡಿಕೊಳ್ಳಲಿದೆ. ನಿಮಗೆ ಅಗತ್ಯವಾದ ಎಲ್ಲಾ ಸವಲತ್ತುಗಳನ್ನು ತಲುಪಿಸುವುದಾಗಿ ಭರವಸೆ ನೀಡಿ, ಸ್ಥಳೀಯರಲ್ಲಿ ಆತ್ಮವಿಶ್ವಾಸ ತುಂಬಿದರು.



