ಡಿವಿಜಿ ಸುದ್ದಿ, ದಾವಣಗೆರೆ: ಮನೆಯಲ್ಲಿದ್ದರೆ ಇಡ್ಲಿ ವಡೆ, ಬೀದಿಗೆ ಬಂದ್ರೆ ತಿಥಿ ವಡೆ.., ಅಬ್ಬಾ..! ಎಷ್ಟು ಭಾರ ಕೊರೊನಾ ನೀನು…, ನಿನಗೊಂದು ಗತಿ ಕಾಣಿಸುವೆ ನಾನು.. ಹೋಗು ಕೊರೊನಾ…ಹೋಗು ನಮ್ಮನ್ನು ಬಿಟ್ಟು ನಿನ್ನ ಸ್ಮಶಾನಕ್ಕೆ ಸಾಗು.. ಎಂಬ ಘೋಷವಾಕ್ಯಗಳೊಂದಿಗೆ ಕರ್ನಾಟಕ ಕಲಾಕುಂಚ ಸಂಘದಿಂದ ಕೊರೊನಾ ವೈರಸ್ ಚಿತ್ರ ರಚಿಸಿ ಜಾಗೃತಿ ಮೂಡಿಸಿದರು.
ನಗರದ ಸಂಗೊಳ್ಳಿ ರಾಯಣ್ಣ ಸರ್ಕಲ್‍ನಲ್ಲಿ ಜಾಗೃತಿ ಮೂಡಿಸಲಾಯಿತು. ಕೊರೊನಾವನ್ನು ಚಂಡಂತೆ ಒದೆಯೋಣ ಎಂಬ ಘೋಷವಾಕ್ಯಗಳಿಗೆ ತಕ್ಕಂತೆ ಚಿತ್ರಗಳನ್ನು ಬಿಡಿಸಿರುವುದು ಗಮನ ಸೆಳೆಯಿತು.
ಕರ್ನಾಟಕ ಕುಂಚ ಕಲಾವಿದರ ಸಂಘದ ಗೌರವಾಧ್ಯಕ್ಷ ನಾಗರಾಜ್ ಚಿನ್ನಿಕಟ್ಟೆ, ಅಧ್ಯಕ್ಷ ಪ್ರಕಾಶ್.ಕೆ.ಎನ್, ಉಪಾಧ್ಯಕ್ಷ ನಾಗರಾಜ.ಸಿ, ಕಾರ್ಯಾಧ್ಯಕ್ಷ ಮಂಜುನಾಥರಾವ್, ಪ್ರಧಾನ ಕಾರ್ಯದರ್ಶಿ ಮಂಜುನಾಥ.ಬಿ, ಕಾರ್ಯದರ್ಶಿ ಗಣೇಶ್.ಸಿ, ಜಂಟಿ ಕಾರ್ಯದರ್ಶಿ ಕೃಷ್ಣ.ಜಿ.ಎಸ್, ಖಜಾಂಚಿ ರವಿ.ಎನ್, ಹಿರಿಯ ಸಲಹೆಗಾರ ಎಂ.ವಿರೂಪಾಕ್ಷ, ಸಂಚಾಲಕ ಅಮೀರ್, ಜಾವೆದ್ ಸೇರಿದಂತೆ ಒಟ್ಟು 14 ಜನ ಕಲಾವಿದರು ಕೊರೊನಾ ಜಾಗೃತಿ ಚಿತ್ರಗಳು ಮತ್ತು ಘೋಷವಾಕ್ಯಗಳನ್ನು ಬಿಡಿಸಿದರು.