ಡಿವಿಜಿ ಸುದ್ದಿ, ದಾವಣಗೆರೆ: ನಗರದ ಜಾಲಿನಗರ ನಿವಾಸಿಯಾದ ವೃದ್ಧನ ಟ್ರಾವಲ್ ಹಿಸ್ಟರ್ ಇಲ್ಲದಿದ್ದರೂ, ಕೊರೊನಾ ಪಾಸಿಟ್ ಬಂದಿದೆ. ಇದು ಜಿಲ್ಲಾಡಳಿತಕ್ಕೆ ತಲೆ ನೋವಾಗಿತ್ತು. ಇದೀಗ ಜಿಲ್ಲಾಡಳಿತಕ್ಕೆ ಗುಜರಾತಿನಿಂದ ವೃದ್ಧನ ಸೊಸೆಯ ಸಹೋದರಿ ಬಂದಿರುವ ಸುಳಿವು ಸಿಕ್ಕಿದ್ದು, ಗುಜರಾತಿನಿಂದ ಬಂದವರ ವರದಿಗಾಗಿ ಜಿಲ್ಲಾಡಳಿತ ಕಾಯುತ್ತಿದೆ.
ಈ ಬಗ್ಗೆ ಮಾಹಿತಿ ನೀಡಿದ ಎಸ್ ಪಿ ಹನುಮಂತರಾಯ, ಸೊಸೆಯ ಸಹೋದರಿ ಗುಜರಾತಿನಲ್ಲಿ ವಾಸವಾಗಿದ್ದಾರೆ. ಮಾ.15 ರಂದು ವೃದ್ಧನ ಸೊಸೆ ಗುಜರಾತಿಗೆ ಹೋಗಿ ದಾವಣಗೆರೆ ಬಂದಿದ್ದಾರೆ. ಅವರ ಜೊತೆ ಅವರ ಸಹೋದರಿಯರು ಬಂದಿದ್ದು, ಗಂಟಲು ದ್ರವದ ವರದಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ.
ಈ ವರದಿ ಬಂದ ನಂತರ ಕೊರೊನಾ ವೈರಸ್ ವೃದ್ಧನಗೆ ಹೇಗೆ ಬಂತು ಎಂಬುದು ನಿರ್ಧರವಾಗಲಿದೆ. ಒಂದು ವೇಳೆ ಗುಜರಾತಿನಿಂದ ಬಂದವರ ವರದಿ ನೆಗೆಟಿವ್ ಬಂದರೆ, ಜಿಲ್ಲಾಡಳಿತ ಮತ್ತೆ ಬೇರೆ ಮೂಲ ಹುಡುಕಬೇಕಾಗುತ್ತದೆ. ವೃದ್ಧ ಮಾತ್ರ ಯಾವುದೇ ಟ್ರಾವಲ್ ಹಿಸ್ಟರಿ ಹೊಂದಿಲ್ಲ. ಆದರೂ ವೈರಸ್ ಬಂದಿದೆ ಎಂದು ಮಾಹಿತಿ ನೀಡಿದರು.



