ಡಿವಿಜಿ ಸುದ್ದಿ, ದಾವಣಗೆರೆ : ವಿದೇಶ ಪ್ರಯಾಣದ ಹಿನ್ನೆಲೆಯಿಂದ ಅಥವಾ ತಬ್ಲಿಗಿಗಳಿಂದ ಜಿಲ್ಲೆಯಲ್ಲಿ ಸೋಂಕು ಬಂದಿಲ್ಲ. ಬದಲಾಗಿ ಅಗತ್ಯ ವಸ್ತುಗಳ ಓಡಾಟದ ಲಾರಿಗಳಲ್ಲಿ ಬಾಗಲಕೋಟೆ, ಹಾಸನ, ಕೂಡ್ಲಿಗಿ ಈ ಕಡೆಗಳಿಗೆ ಹೋಗಿ ಬಂದ ಹಿನ್ನೆಲೆ ಇರುವವರಿಂದ ಸೋಂಕು ತಲುಗಿದೆ ಎಂಬ ನಿಲುವಿಗೆ ಬರಲಾಗಿದೆ ಎಂದು ಎಸ್ ಪಿ ಹನುಮಂತರಾಯ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾನ್ಯವಾಗಿ ತಜ್ಞರು ಹೇಳುವಂತೆ ಕಂಟೈನ್‍ಮೆಂಟ್ ಝೋನ್‍ನ ದಟ್ಟಣೆ ಪ್ರದೇಶದಲ್ಲಿ ಪಾರ್ಷಿಯಲ್ ಏರ್ ಬೋರ್ನ್‍ನಿಂದ ಸ್ಥಳೀಯವಾಗಿ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಈ ರೀತಿಯಾಗಿ ಇಲ್ಲಿಯೂ ಸೋಂಕು ಹರಡಿರಬಹುದು ಎಂದರು.
ಈ ಸಂದರ್ಭದಲ್ಲಿ ಜಿ.ಪಂ ಸಿಇಓ ಪದ್ಮಾ ಬಸವಂತಪ್ಪ, ಕೋವಿಡ್ ಜಿಲ್ಲಾ ನೋಡಲ್ ಅಧಿಕಾರಿ ಪ್ರಮೋದ್ ನಾಯಕ್, ಡಿಹೆಚ್‍ಓ ಡಾ.ರಾಘವೇಂದ್ರಸ್ವಾಮಿ, ಡಿಎಸ್‍ಓ ಡಾ.ರಾಘವನ್ ಇದ್ದರು.



