ಡಿವಿಜಿ ಸುದ್ದಿ, ದಾವಣಗೆರೆ: ಜಿಲೆಯಲ್ಲಿಂದು 31 ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು , ಇಬ್ಬರು ಸಾವನ್ನಪ್ಪಿದ್ದಾರೆ. ಈ ಮೂಲಕ ಸೋಂಕಿತರ ಸಂಖ್ಯೆ 689ಕ್ಕೆ ಏರಿಕೆಯಾಗಿದೆ.
ಕೊರೊನಾದಿಂದ ಇಂದು 50 ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು ಗುಣಮುಖರಾದವರ ಸಂಖ್ಯೆ 544ಕ್ಕೆ ಏರಿಕೆಯಾಗಿದೆ. ಇಂದು ಇಬ್ಬರು ಮೃತಪಟ್ಡಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 24ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಇನ್ನು 121 ಸಕ್ರಿಯ ಪ್ರಕಣಗಳಿವೆ.
ಇಂದು ಪತ್ತೆಯಾದ 31 ಪಾಸಿಟಿವ್ ಪ್ರಕಣಗಳಲ್ಲಿ ದಾವಣಗೆರೆಯಲ್ಲಿ ಅಧಿಕ 17,ಹರಿಹರ 07,ಜಗಳೂರು 05, ಚನ್ನಗಿರಿ 01, ಹೊನ್ನಾಳಿ 01 ಪ್ರಕರಣಗಳು ಪತ್ತೆಯಾಗಿವೆ. ಮಲೇಬೆನ್ನೂರು 43 ವರ್ಷದ ಮಹಿಳೆ, ದಾವಣಗೆರೆಯ ದೇವರಾಜ್ ಅರಸು ಬಡಾವಣೆಯ 62 ವರ್ಷದ ಪುರುಷ ಸಾವನ್ನಪ್ಪಿದ್ದಾರೆ.



