ಡಿವಿಜಿ ಸುದ್ದಿ, ಹೊನ್ನಾಳಿ: ತಾಲೂಕಿನ ಕೊರೊನಾ ಪಾಸಿಟಿವ್ ಮಹಿಳೆಯನ್ನು ಕರೆದೊಯ್ಯಲು ಬಂದಿದ್ದ ಆರೋಗ್ಯ ಇಲಾಖೆ ಸಿಬ್ಬಂದಿ, ಪೊಲೀಸರಿಗೆ ಅಚ್ಚರಿ ಕಾದಿತ್ತು.
ಸೋಂಕಿತ ಮಹಿಳೆ ತನ್ನ ಮೈಯಲ್ಲಿ ದೇವರು ಬಂದಿದೆ ಎಂದು ಕೆಲ ಹೊತ್ತು ಹೈಡ್ರಾಮ ಸೃಷ್ಠಿಸಿದ ಘಟನೆ ಹೊನ್ನಾಳಿ ತಾಲೂಕಿನ ಗೋಪಗೊಂಡನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಜೋಗಮ್ಮಗೆ ಕೊರೊನಾ ಪಾಸಿವ್ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಸೋಂಕಿತ ಮಹಿಳೆಯನ್ನು ಕರೆದೊಯ್ಯಲು ಇಂದು ಹೋದಾಗ, ಮಹಿಳೆ ದೇವರು ಬಂದಿದೆ ಎಂದು ಕೂಗಾಡುತ್ತಾ ಎಲ್ಲರನ್ನೂ ನಿಂದಿಸಿದರು. ಕೊನೆಗೆ ಪೊಲೀಸರು ಕಾಲಿಗೆ ಬೀಳಬೇಕು ಎಂದು ಹಠ ಹಿಡಿದು ಅಂಬ್ಯೂಲೆನ್ಸ್ ಮುಂದೆ ಕುಳಿತು ರಂಪಾಟ ಮಾಡಿದರು. ಕೊನೆಗೆ ಮಹಿಳೆಯನ್ನು ಕರೆದೊಯ್ಯಲು ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಸಿಬ್ಬಂದಿ ಹರಸಾಹಸ ಪಟ್ಟರು.
ಘಟನೆಯಿಂದ ಕೆಲಕಾಲ ಗ್ರಾಮದಲ್ಲಿ ಜನರು ಆತಂಕಗೊಂಡಿದ್ದರು. ಸ್ವಲ್ಪ ಹೊತ್ತಿನ ನಂತರ ಮಹಿಳೆ ಸಹಜ ಸ್ಥಿತಿಗೆ ಬಂದ ನಂತರ ಮಹಿಳೆ ಆಸ್ಪತ್ರೆಗೆ ಕರೆದೊಯ್ಯಲಾಯಿತು.



