ಡಿವಿಜಿ ಸುದ್ದಿ, ದಾವಣಗೆರೆ: ದಾವಣಗೆರೆಯಲ್ಲಿ ಕೊರೊನಾ ವೈರಸ್ ಅಟ್ಟಹಾಸ ಮುಂದುವರಿದಿದ್ದು, ಇಂದು 21 ಕೊರೊನಾ ಪಾಸಿಟಿವ್ ಕೇಸ್ ಗಳು ಪತ್ತೆಯಾಗಿವೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿದ ಮಾಹಿತಿಯಲ್ಲಿ 19 ಪಾಸಿಟಿವ್ ಕೇಸ್ ಎಂದು ನಮೂದಿಸಲಾಗಿತ್ತು. ಇದೀಗ ಜಿಲ್ಲಾಧಿಕಾರಿ ಸ್ಪಷ್ಟನೆ ನೀಡಿದ್ದು, ಜಿಲ್ಲೆಯಲ್ಲಿ ಒಟ್ಟು 21 ಕೇಸ್ ಗಳು ಪತ್ತೆಯಾಗಿವೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿರ ಸಂಖ್ಯೆ 111 ಕ್ಕೆ ಏರಿಕೆಯಾಗಿದೆ.
ದಾವಣಗೆರೆ ಕಳೆದ 20 ದಿನದಿಂದ ಕೊರೊನಾ ವೈರಸ್ ಗೆ ಅಕ್ಷರಶಃ ತತ್ತರಿಸಿ ಹೋಗಿದೆ. ದಿನದಿಂದ ದಿನಕ್ಕೆ ಸೋಂಕಿತ ಪ್ರಕರಣಗಳು ಹೆಚ್ಚುತ್ತಲೇ ಸಾಗಿದೆ. ಇಂದು 21 ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಪಿ-976 ಬೆಳ್ಳುಳ್ಳಿ ವ್ಯಾಪಾರಿಯಿಂದ ನಾಲ್ಕು ಜನರಿಗೆ ಸೋಂಕು, ಪಿ-556 ಮೃತ ವೃದ್ದನ ದ್ವಿತೀಯ ಸಂಪರ್ಕ ಸೋಂಕಿತನಿಂದ 08 ಜನರಿಗೆ, ಪಿ-533 ನರ್ಸ್ ನ ಸಂಪರ್ಕದಲ್ಲಿದ್ದ ಸೋಂಕಿತರಿಂದ 3 ಜನರಿಗೆ ಸೋಂಕು, 694 ಐಎಲ್ಐ ಸೊಂಕಿತರಿಂದ ಒಬ್ಬರಿಗೆ ಸೋಂಕು, ಅಹಮದಾಬಾದ್ ನಿಂದ ಬಂದ ಇಬ್ಬರು ಪುರುಷರಿಗೆ ಸೋಂಕು, ಕೇರಳದಿಂದ ಬಂದ ಮಹಿಳೆಗೆ ಸೋಂಕು ಹಾಗೂ ಹೊಸಪೇಟೆಯಿಂದ ಬಂದ ಇಬ್ಬರು ಯುವಕರಿಗೆ ಸೋಂಕು
- ಪಿ-1247 35 ವರ್ಷದ ಮಹಿಳೆಯಾಗಿದ್ದು ಪಿ-694 ಸಂಪರ್ಕ
- ಪಿ-1248 27 ವರ್ಷದ ಯುವಕ ಪಿ-662 ಸಂಪರ್ಕ
- ಪಿ-1249 58 ವರ್ಷದ ಮಹಿಳೆ ಪಿ-662 ಜೊತೆ ಸಂಪರ್ಕ
- ಪಿ-1250 22 ವರ್ಷದ ಮಹಿಳೆಯಾಗಿದ್ದು ಪಿ-662 ಜೊತೆ ಸಂಪರ್ಕ
- ಪಿ-1251 48 ರ್ವಷದ ಪುರುಷನಾಗಿದ್ದು ಕಂಟೇನ್ ಮೆಂಟ್ ಝೋನ್ ಸಂಪರ್ಕ
- ಪಿ-1252 14 ವರ್ಷದ ಯುವಕ ಪಿ-662 ಸಂಪರ್ಕ
- ಪಿ-1253 5 ವರ್ಷದ ಮಗು ಪಿ-662 ಸಂಪರ್ಕ
- ಪಿ-1254 30 ವರ್ಷದ ಯುವಕ ಪಿ-633 ಸಂಪರ್ಕ
- ಪಿ-1255 31 ವರ್ಷದ ಯುವಕ ಪಿ-633 ಸಂಪರ್ಕ
- ಪಿ-1292 23 ವರ್ಷದ ಮಹಿಳೆ ಪಿ-976 ಸಂಪರ್ಕ
- ಪಿ-1293 36 ವರ್ಷದ ಮಹಿಳೆ ಪಿ-976 ಸಂಪರ್ಕ
- ಪಿ-1309 40ವರ್ಷದ ಮಹಿಳೆ ಪಿ-663 ಸಂಪರ್ಕ
- ಪಿ-1367 25 ವರ್ಷದ ಯುವಕ ಗುಜರಾತಿನ ಅಹಮದಾಬಾದ್ ಸಂಪರ್ಕ
- ಪಿ-1368 30 ವರ್ಷದ ಮಹಿಳೆ ಕೇರಳ ರಾಜ್ಯದ ಸಂಪರ್ಕ
- ಪಿ-1389 20 ಯುವಕ ಗುಜರಾತಿನ ಅಹಮದಾಬಾದ್ ಸಂಪರ್ಕ
- ಪಿ-1370 11 ವರ್ಷದ ಯುವಕ ಪಿ976 ಸಂಪರ್ಕ
- ಪಿ-1371 13 ವರ್ಷದ ಯುವತಿ ಪಿ-976 ಸಂಪರ್ಕ
- ಪಿ1372 35 ವರ್ಷದ ಮಹಿಳೆ ಪಿ-662 ಸಂಪರ್ಕ
- ಪಿ-1373 70 ವರ್ಷದ ವೃದ್ಧ ಪಿ556 ಸಂಪರ್ಕ
- ಹೊಸಪೇಟೆಯಿಂದ ಬಂದ ಇಬ್ಬರಲ್ಲಿ ಕೊರೊನಾ ಪಾಸಿಟಿವ್
ಜಿಲ್ಲೆಯಲ್ಲಿ ಒಟ್ಟು111 ಸೋಂಕಿತರಿದ್ದಾರೆ. ಇದರಲ್ಲಿ 4 ಜನ ಮೃತಪಟ್ಟಿದ್ದಾರೆ. ಇಬ್ಬರು ಗುಣಮುಖರಾಗಿದ್ದಾರೆ. ಇನ್ನು 105 ಸಕ್ರಿಯ ಪ್ರಕರಣಗಳಿವೆ.
Mid day Bulletin 19/05/2020.@CMofKarnataka @BSYBJP @DVSadanandGowda @SureshAngadi_ @sriramulubjp @drashwathcn @BSBommai @mla_sudhakar @iaspankajpandey @Tejasvi_Surya @BBMP_MAYOR @BBMPCOMM @CCBBangalore @BlrCityPolice @KarnatakaVarthe @PIBBengaluru @KarFireDept pic.twitter.com/UioZQsXIey
— Karnataka Health Department (@DHFWKA) May 19, 2020



