ಡಿವಿಜಿ ಸುದ್ದಿ, ಚನ್ನಗಿರಿ: ತಾಲ್ಲೂಕಿನಿಂದ ದೆಹಲಿಗೆ ಹೋಗಿದ್ದ 11 ಜನರ ಕೊರೊನಾ ವೈರಸ್ ಲ್ಯಾಬ್ ವರದಿ ನೆಗೆಟಿವ್ ಬಂದಿದೆ ಎಂದು ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾಹಿತಿ ನೀಡಿದರು.
ದೆಹಲಿಯಿಂದ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿಗೆ ಬಂದಿದ್ದ ಹನ್ನೊಂದು ಜನರ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಈ ಎಲ್ಲ ವರದಿ ನೆಗೆಟಿವ್ ಬಂದಿವೆ. ಇವರಲ್ಲಿ ಯಾರು ಕೂಡ ನಿಜಾಮುದ್ದೀನ ಪ್ರಾರ್ಥನೆ ಯಲ್ಲಿ ಪಾಲ್ಗೊಂಡಿಲ್ಲ.
ಇವರು ಫೆಬ್ರವರಿ 28 ರಂದು ದೆಹಲಿಯಿಂದ ಚನ್ನಗಿರಿ ತಲುಪಿದ್ದಾರೆ. ದೆಹಲಿಗೆ ಹೋಗಿ ಬಂದ ಕಾರಣಕ್ಕೆ ಇವರಿಗೆ ಜಿಲ್ಲಾ ಆಸ್ಪತ್ರೆ ಯ ಕ್ವಾರೆಂಟೈನಲ್ಲಿ ಇಡಲಾಗಿತ್ತು. ಆದ್ರೆ ಇವರಿಗೆ ಕೊರೊನಾ ಸೋಂಕು ತಗುಲಿಲ್ಲ ಎಂದು ಸ್ಪಷ್ಟಪಡಿಸಿದರು.



