ಡಿವಿಜಿ ಸುದ್ದಿ, ಚನ್ನಗಿರಿ: ಕಂಟೇನ್ ಮೆಂಟ್ ಝೋನ್ ಗಳಾದ ಚನ್ನಗಿರಿ , ಕೆರೆಬಿಳಚಿ ಸಂತೇಬೆನ್ನೂರು , ಕೋಗಲೂರು ಗ್ರಾಮಕ್ಕೆ ಎಸಿ ಮಮತ ಹೊಸಗೌಡರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಟಾಸ್ಕ್ ಫೋರ್ಸ್ ಅಧಿಕಾರಿಗಳು ಶ್ರದ್ದೆಯಿಂದ ಕಾರ್ಯನಿರ್ವಹಿಸುತಿದ್ದು, ಗ್ರಾಮೀಣಾ ಭಾಗದ ಜನರು ಹೊರಗಡೆ ಹೋಗದಂತೆ ಜಾಗೃತಿ ವಹಿಸಬೇಕು. ಗ್ರಾಮಕ್ಕೆ ಹೊಸದಾಗಿ ಬಂದ ವ್ಯಕ್ತಿಗಳು ಕಂಡುಬಂದರೆ ಗ್ರಾಪಂ ಪಿಡಿಒಗಳಿಗೆ ವಿಷಯ ತಲುಪಿಸಬೇಕು. ಅವರ ಗಂಟಲು ದ್ರವವನ್ನು ಪರೀಕ್ಷಿ ಎಂದು ತಾಲೂಕು ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಜೊತೆಗೆ ತಮ್ಮಮನೆಯ ಮುಂದಿನ ಪರಿಸರವನ್ನು ಸ್ವಚ್ಚವಾಗಿ ಇಟ್ಟುಕೊಳ್ಳಬೇಕೆಂದರು. ಇತ್ತೀಚಿನ ದಿನಗಳಲ್ಲಿ ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಿಸಬೇಕೆಂದು ಹೋರಾಟ ನಡೆಸುತಿದ್ದಾರೆ. ಅವರ ಹೋರಾಟಕ್ಕೆ ಜಯಸಿಗಲಿ ಎಂದರು.
ಈ ಸಂದರ್ಭದಲ್ಲಿ ಚನ್ನಗಿರಿ ತಹಶೀಲ್ದಾರ್ ಪುಟ್ಟರಾಜ್ ಗೌಡ , ತಾಪಂ ಕಾರ್ಯನಿರ್ವಾಹಣಾಧಿಕಾರಿ ಪ್ರಕಾಶ್, ಟಿಹೆಚ್ಒ ಪ್ರಭು ಸೇರಿದಂತೆ ಕಂದಾಯ ಅಧಿಕಾರಿಗಳು ಉಪಸ್ಥಿತರಿದ್ದರು.