ಡಿವಿಜಿ ಸುದ್ದಿ, ಚನ್ನಗಿರಿ : ತಾಲ್ಲೂಕಿನ ಸಂತೇಬೆನ್ನೂರು ಗ್ರಾಮದಲ್ಲಿ ಪೊಲೀಸ್ ಇಲಾಖೆ, ಪಾಂಡೋಮಟ್ಟಿಯ ಶ್ರೀ ಗುರುಬಸವ ಮಹಾಸ್ವಾಮೀಜಿ ಅವರ ಸಹಯೋಗದೊಂದಿಗೆ ಮಾಸ್ಕ್ , ಕರಪತ್ರ ವಿತರಿಸಿ ಕೊರೊನಾ ವೈರಸ್ ಜಾಗೃತಿ ಮೂಡಿಸಿದರು.

ಚನ್ನಗಿರಿ ಡಿವೈಎಸ್ಪಿ ಪ್ರಶಾಂತ್ ಮುನ್ನೊಳಿ , ವೃತ್ತನಿರೀಕ್ಷಕರಾದ ಆರ್ ಆರ್ ಪಾಟೀಲ್ , ಸಂತೇಬೆನ್ನೂರು ಪೋಲೀಸ್ ಠಾಣೆಯ ಪಿಎಸ್ಐ ಎಸ್ ಶಿವರುದ್ರಪ್ಪ ಮೇಟಿ, ಸಂತೇಬೆನ್ನೂರು ಜಾಮಿಯಾ ಮಸೀದಿಯ ಖತಿಬೋ , ಇಮಾಮ್ ಹಜ್ರತ್ , ಮೌಲಾನ ಮೊಹಮ್ಮದ್ ಸಲೀಂ , ಚನ್ನಗಿರಿ ಕ್ರಿಶ್ಚಿಯನ್ ಧರ್ಮಗುರು ಫಾದರ್ ಸಂತೋಷ್ ಜಾಗೃತಿಗೆ ಸಾಥ್ ನೀಡಿದರು.
ಊರಿನ ಪ್ರಮುಖ ಬೀದಿಗಳಲ್ಲಿ ಕೊರೋನ ಬಗ್ಗೆ ಜಾಗೖತಿ ಮೂಡಿಸುತ್ತಾ ಸಾರ್ವಜನಿಕರಿಗೆ ಮತ್ತು ಮಕ್ಕಳಿಗೆ ಮಾಸ್ಕ್ ಗಳನ್ನು ವಿತರಿಸಿದರು. ಇದಲ್ಲದೆ ಕರಪತ್ರಗಳನ್ನು ಮನೆಗಳಿಗೆ ಮತ್ತು ಮನಕ್ಕೆ ತಟ್ಟವ ಕಾರ್ಯ ನೆರೆವೇರಿಸಿ ಮಹಾಮಾರಿ ಕೊರೊನಾ ಬಗ್ಗೆ ಜಾಗೃತಿಯನ್ನು ಮೂಡಿಸುವ ಕಾರ್ಯವನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಸಂತೇಬೆನ್ನೂರು ಪೋಲೀಸ್ ಠಾಣೆಯ ಸಿಬ್ಬಂದಿ ವರ್ಗದವರು ಜಿಪಂ ಸದಸ್ಯರಾದ ಪಿ.ವಾಗೀಶ್, ಕೆ.ಬಸವರಾಜ್,ವಕ್ಫ್ ಬೋರ್ಡ್ ಉಪಾಧ್ಯಕ್ಷ ಕೆ.ಸಿರಾಜ್ ಅಹಮ್ಮದ್, ಗ್ರಾ.ಪಂ.ಸದಸ್ಯ ರಹಮತುಲ್ಲಾ ಎಸ್.ಕೆ, ಶಿಕ್ಷಕರಾದ ವೀರೇಶ್ ಪ್ರಸಾದ್,ಎಂ.ಬಿ.ನಾಗರಾಜ್ ಕಾಕನೂರು, ಅಲ್ತಾಫ್ ಕೆರೆಬಿಳಚಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.



