ಡಿವಿಜಿ ಸುದ್ದಿ, ದಾವಣಗೆರೆ: ನಿನ್ನೆ ರಾತ್ರಿ ಶಾಸಕ ಎಸ್ .ಎ ರವೀಂದ್ರನಾಥ್ ಮೊಮ್ಮಗನ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ವಿದ್ಯುತ್ ಕಂಬ ಮುರಿದು ಮನೆಯ ಮೇಲೆ ಬಿದ್ದಿದ್ದು ಭಾರೀ ಅನಾಹುತ ತಪ್ಪಿದಂತಾಗಿದೆ. ದಾವಣಗೆರೆ ಹೊರ ವಲಯದ ಶಾಮನೂರಿನಲ್ಲಿ ಈ ಘಟನೆ ನಡೆದಿದೆ.
ಶಾಸಕರ ಪುತ್ರಿ, ಪಾಲಿಕೆ ಸದಸ್ಯೆ ವೀಣಾ ನಂಜಪ್ಪನವರ ಪುತ್ರ ಅರುಣ್ ಕಾರು ಚಾಲನೆ ಮಾಡುತ್ತಿದ್ದು, ನಿಯಂತ್ರಣ ತಪ್ಪಿದ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದ ರೊಚ್ಚಿಗೆದ್ದ ಜನರು ಶಾಸಕನ ಅರುಣ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಕ್ಕೆ ಅಲ್ಲಿನ ಜನರಿಗೆ ಅವಾಜ್ ಹಾಕಿ , ಶಾಸಕರ ಪಾಸ್ ಕಾರಿನಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ.
ಬೆಳಗ್ಗೆ ಕಾರು ತಗೆದುಕೊಂಡು ಹೋಗಲು ಬಂದಿದ್ದ ಪೊಲೀಸರೊಂದಿಗೆ ಸ್ಥಳೀಯರು ವಾಗ್ವಾದ ನಡೆಸಿದ್ದಾರೆ. ಶಾಸಕರ ಪಾಸ್ ಇರುವ ಕಾರಣ ಸ್ಥಳಕ್ಕೆ ಶಾಸಕರು ಬರುವಂತೆ ಆಗ್ರಹಿಸಿದರು. ಇದರಿಂದ ಸ್ವಲ್ಪ ಹೊತ್ತು ಪೊಲೀಸರು ಪರದಾಟ ನಡೆಸಿದರು. ಕೊನೆಗೆ ಮನೆ ಮಾಲೀಕನ ಮನವೊಲಿಸಿ ಕಾರು ಸ್ಥಳಾಂತರ ನಡೆಸಿದರು.