ಡಿವಿಜಿ ಸುದ್ದಿ, ದಾವಣಗೆರೆ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಂಡಿಸಿರುವ ಬಜೆಟ್ ಉತ್ತಮವಾಗಿದ್ದು, ಅದರಲ್ಲೂ ರೈತರಿಗೆ ಶಕ್ತಿ ತುಂಬಿಸುವ ಬಜೆಟ್ ಆಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ ಹೇಳಿದ್ದಾರೆ.
ಯಡಿಯೂರಪ್ಪ ಅವರು ಕೃಷಿ ವಲಯಕ್ಕೆ ದೂರ ದೃಷ್ಟಿ ಇಟ್ಟುಕೊಂಡು ಯೋಜನೆ ರೂಪಿಸಿದ್ದಾರೆ. ಇದೊಂದು ಸರ್ವ ವ್ಯಾಪಿ ಸರ್ವ ಸ್ಪರ್ಶಿ ಬಜೆಟ್ . ಎಸ್ ಎಸ್ ಎಲ್ ಸಿಯಲ್ಲಿ ಉನ್ನತ ದರ್ಜೆಯಲ್ಲಿ ಪಾಸಾದ ಎಸ್ ಸಿ, ಎಸ್ ಟಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ, ಗಾರ್ಮೆಂಟ್ ಗಳಿಗೆ ಹೋಗುವ ಮಹಿಳೆಯರಿಗೆ ಉಚಿತ ಬಸ್ ಪಾಸ್, ಆಟೋ ಚಾಲಕರ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ನೆರವು. ಹಿರಿಯ ನಾಗರಿಕರಿಗೆ ಪ್ರವಾಸ, ಮಠ ಮಾನ್ಯಗಳಿಗೆ ಅನುದಾನ ಹೀಗೆ ಎಲ್ಲಾ ವರ್ಗದವರನ್ನು ತಲುಪಿದ್ದಾರೆ.
ಭೌಗೊಳಿಕವಾಗಿ ದಾವಣಗೆರೆ ಜಿಲ್ಲೆಗೆ ಹೊಸ ಯೋಜನೆ ಘೋಷಣೆ ಆಗಿಲ್ಲ ಎನ್ನುವುದಕ್ಕಿಂತ ವರ್ಗ ಆಧಾರದ ಮೇಲೆ ಎಲ್ಲಾ ಯೋಜನೆಗಳು ಎಲ್ಲಾ ಜಿಲ್ಲೆಗೆ ವ್ಯಾಪಿಸುತ್ತವೆ. ಯಡಿಯೂರಪ್ಪ ಅವರು ನೀರಾವರಿ ಯೋಜನೆಗೆ ಅದರಲ್ಲೂ ಮಹದಾಯಿ, ಎತ್ತಿನಹೊಳೆ ಯೋಜನೆಗೆ ಹೆಚ್ಚಿನ ಆದ್ಯತೆ ನೀಡಿದ್ಧಾರೆ. ಚುನಾವಣೆ ಪ್ರನಾಳಿಕೆಯಲ್ಲಿ ನೀಡದ ಎಲ್ಲಾ ಭರವಸೆಯನ್ನು ಈಡೇರಿಸುವ ಕೆಲಸ ಮಾಡಿದ್ದಾರೆ.



