ಡಿವಿಜಿ ಸುದ್ದಿ, ದಾವಣಗೆರೆ: ಫೆ.08 ರಿಂದ 10 ರವರೆಗೆ ಹರಪನಹಳ್ಳಿ ತಾಲ್ಲೂಕಿನ ಶ್ರೀ ಕ್ಷೇತ್ರ ಉಚ್ಚoಗಿದುರ್ಗದಲ್ಲಿ ಭರತ ಹುಣ್ಣಿಮೆ ಹಿನ್ನೆಲೆ ರಾಜ್ಯ ಮತ್ತು ಹೊರ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಬರುವ ನಿರೀಕ್ಷೆ ಇದ್ದು, ಬರುವ ಭಕ್ತರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಕೆಎಸ್ ಆರ್ ಟಿಸಿ ಜಾತ್ರೆ ವಿಶೇಷವಾಗಿ 40 ಕ್ಕೂ ಹೆಚ್ಚು ಬಸ್ ಗಳ ವ್ಯವಸ್ಥೆ ಕಲ್ಪಿಸಿದೆ.
ಕೆಎಸ್ ಆರ್ ಟಿಸಿ ದಾವಣಗೆರೆ ವಿಭಾಗದಿಂದ ರಾಜ್ಯದ ವಿವಿಧ ಭಾಗಕ್ಕೆ 40 ಬಸ್ ಬಿಟ್ಟಿದೆ. ದಾವಣಗೆರೆಯಿಂದ ಉಚ್ಚoಗಿದುರ್ಗ, ಜಗಳೂರಿನಿಂದ ಉಚ್ಚoಗಿದುರ್ಗಕ್ಕೆ,ಹಾಗೂ ಅಣಜಿ ಕ್ರಾಸ್ ನಿಂದ ಅನಗೋಡಿಗೆ 2 ಬಸ್ಸುಗಳನ್ನು ಬಿಡಲಾಗಿದೆ. ಅಗತ್ಯಕ್ಕೆ ಅನುಗುಣವಾಗಿ ಹೆಚ್ಚುವರಿ ಬಸ್ಸುಗಳನ್ನು ಬಿಡಲು ಸಂಸ್ಥೆ ತಯಾರಿದೆ ಎಂದು ವಿಭಾಗೀಯ ನಿಯಂತ್ರಣಧಿಕಾರಿ ಸಿದ್ದೇಶ್ವರ ಹೆಬ್ಬಾಳ್ ತಿಳಿಸಿದ್ದಾರೆ.
ಇದಲ್ಲದೆ ಹರಪನಹಳ್ಳಿಯಿಂದ ಉಚ್ಚoಗಿದುರ್ಗಕ್ಕೂ ಹೆಚ್ಚುವರಿ 14 ಬಸ್ಸುಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಭಕ್ತರ ಸಂಖ್ಯೆ ಹೆಚ್ಚದಲ್ಲಿ ಇನ್ನಷ್ಟು ಬಸ್ಸುಗಳ ವ್ಯವಸ್ಥೆ ಮಾಡಲು ಸಂಸ್ಥೆ ತಯಾರಿದೆ ಎಂದು ಹರಪನಹಳ್ಳಿ ಕೆಎಸ್ಆರ್ ಟಿಸಿ ದೀಪೋ ವ್ಯವಸ್ಥಾಪಕರಾದ ಸಚಿನ್ ಎಂ ಗೌಡ ತಿಳಿಸಿದ್ದಾರೆ.



