ಡಿವಿಜಿ ಸುದ್ದಿ, ದಾವಣಗೆರೆ: ವಿಶ್ವಗುರು, ಸಮಾನತೆಯ ಹರಿಕಾರ, ವಿಶ್ವಕ್ಕೆ ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವದ ಬುನಾದಿಯನ್ನು ಹಾಕಿದ, ವಚನಗಳ ಮೂಲಕ ಸಮಾಜದ ಮೌಢ್ಯತೆಯನ್ನು ತಿದ್ದಿದ ಬಸವೇಶ್ವರರ ಜಯಂತಿಯನ್ನು ದೇಶಾದ್ಯಂತ ಲಾಕ್ ಡೌನ್ ಹಿನ್ನೆಲೆ ರಾಷ್ಟ್ರೀಯ ಬಸವ ಸೇನೆಯಿಂದ ಸರಳವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಹನಗರಪಾಲಿಕೆ ಸದಸ್ಯ ಶಿವನಗೌಡ ಟಿ ಪಾಟೀಲ್ ,ಶ್ರೀಕಾಂತ್ ನೀಲಗುಂದ , ಅಭಿಷೇಕ್ ಎಳೆಹೊಳೆ, ರವಿತೇಜಾ,
ನವಿನ್ ಕುಮಾರ್ ಎಚ್ ಬಿ , ಮಹಾಂತೇಶ್, ನಾಗರಾಜ್ ಬೆಳವನೂರು ಮತ್ತಿತರರು ಉಪಸ್ಥಿತರಿದ್ದರು.



