ಡಿವಿಜಿ ಸುದ್ದಿ, ದಾವಣಗೆರೆ: ಶ್ರೀ ತರಳಬಾಳು ಜಗದ್ಗುರು ರೆಸಿಡೆನ್ಸಿಯಲ್ ಸ್ಕೂಲ್ ಅನುಭವ ಮಂಟಪದಲ್ಲಿ 71 ನೇ ಗಣ ರಾಜ್ಯೋತ್ಸವ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲೆ ಮಂಜುಳಾ ಕೆ ಬಿ ವಹಿಸಿದ್ದರು. ಗಣ ರಾಜ್ಯೋತ್ಸವದ ವಿಶೇಷ ಮುಖ್ಯ ಅತಿಥಿಯಾಗಿ ವಿಶ್ರಾಂತ ಕುಲಪತಿ ಡಾಕ್ಟರ್ ಕೆ. ಸಿದ್ದಪ್ಪ ವಿಶ್ರಾಂತ ವಹಿಸಿದ್ದರು. ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥ ಸೋಮಶೇಖರಪ್ಪ ಕೆ, ವೆಂಕಟೇಶ್ ಎ, ಫಿಲೋಮಿನಾ, ಭುವನೇಶ್ವರಿ ಜೆ ಎಸ್, ಗೌರಂಬಿಕ ಅವರು ಉಪಸ್ಥಿತರಿದ್ದರು.

ಗಣ ರಾಜ್ಯೋತ್ಸವ ಸಮಾರಂಭದಲ್ಲಿ ಅನುಭವಮಂಟಪ ಶಾಲಾ ಸಂಕೀರ್ಣದ ವಿವಿಧ ವಿಭಾಗಗಳಾದ ಅಕ್ಕಮಹಾದೇವಿ ಸರ್ಸರಿ ಶಾಲೆ, ಶ್ರೀ ತರಳಬಾಳು ಜಗದ್ಗುರು ಕಿರಿಯ ಪ್ರಾಥಮಿಕ ಶಾಲೆ, ಶ್ರೀ ತರಳಬಾಳು ಜಗದ್ಗುರು ಹಿರಿಯ ಪ್ರಾಥಮಿಕ ಶಾಲೆ, ಶ್ರೀ ತರಳಬಾಳು ಜಗದ್ಗುರು ಪ್ರೌಢಶಾಲೆ, ಶ್ರೀ ತರಳಬಾಳು ಸೆಂಟ್ರಲ್ ಸ್ಕೂಲ್, ಶ್ರೀ ತರಳಬಾಳು ಐ ಸಿ ಎಸ್ ಇ, ಶ್ರೀ ತರಳಬಾಳು ಜಗದ್ಗುರು ಕಾಲೇಜು ವಿಭಾಗದ ವಿದ್ಯಾರ್ಥಿಗಳಿಂದ ಪಥ ಸಂಚಲನ ಮತ್ತು ದೇಶಾಭಿಮಾನ ಸಾರುವ ನೃತ್ಯ ಕಾರ್ಯಕ್ರಮಗಳು ಜರುಗಿದವು.




