Connect with us

Dvg Suddi-Kannada News

ಹರಿಹರ ತಾಲ್ಲೂಕು  ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯ ಹುದ್ದೆಗಳ ಮೀಸಲಾತಿ ವಿವರ ಇಲ್ಲಿದೆ ನೋಡಿ..

ಹರಿಹರ

ಹರಿಹರ ತಾಲ್ಲೂಕು  ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯ ಹುದ್ದೆಗಳ ಮೀಸಲಾತಿ ವಿವರ ಇಲ್ಲಿದೆ ನೋಡಿ..

ಡಿವಿಜಿ ಸುದ್ದಿ, ಹರಿಹರ: ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ  ಹುದ್ದೆಗಳಿಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಅರ್ಹ ಅಭ್ಯರ್ಥಿಗಳು ಡಿ.23 ರಿಂದ http://davanagere.nic.in ವೆಬ್‍ಸೈಟ್ ಮೂಲಕ ಆನ್‍ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. 2020 ರ ಜನವರಿ 23 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

 ಅಂಗನವಾಡಿ ಕಾರ್ಯಕರ್ತೆಯರ ಮೀಸಲಾತಿ ವಿವರ: ವಾಸನ ಗ್ರಾ.ಪಂ ಯ ವಾಸನ-ಬಿ ಅಂಗನವಾಡಿ ಕೇಂದ್ರ, ಸಾರಥಿ ಗ್ರಾ.ಪಂಯ ಕರ್ಲಹಳ್ಳಿ ಅಂಗನವಾಡಿ ಕೇಂದ್ರಗಳಲ್ಲಿ ಇತರೆ ವರ್ಗದವರಿಗೆ ಮೀಸಲಾತಿ ನೀಡಲಾಗಿದೆ.ಮಲೆಬೆನ್ನೂರು ಪುರಸಭೆಯ ಮಲೆಬೆನ್ನೂರು ಆಶ್ರಯ ಕಾಲೋನಿ ವಾರ್ಡ್ ನಂ.23ರಲ್ಲಿನ ಮಿನಿ ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಇತರೆ ವರ್ಗದವರಿಗೆ ಮೀಸಲಾತಿ ನೀಡಲಾಗಿದೆ.

ಸಹಾಯಕಿಯರ ಹುದ್ದೆ ಮತ್ತು ಮೀಸಲಾತಿ ವಿವರ: ಗುತ್ತೂರು ಗ್ರಾ.ಪಂ.ಯ ಗುತ್ತೂರು-ಎ ಅಂಗನವಾಡಿ ಕೇಂದ್ರ, ಯಲವಟ್ಟಿ ಗ್ರಾ.ಪಂ ಯ ಲಕ್ಕಶೆಟ್ಟಿಹಳ್ಳಿ ಅಂಗನವಾಡಿ ಕೇಂದ್ರ, ಹನಗವಾಡಿ ಗ್ರಾ.ಪಂ.ಯ ಹನಗವಾಡಿ-ಸಿ ಮತ್ತು ಡಿ, ಅಂಗನವಾಡಿ ಕೇಂದ್ರ, ಜಿಗಳಿ ಗ್ರಾ.ಪಂ ಜಿಗಳಿ-ಸಿ ಅಂಗನವಾಡಿ ಕೇಂದ್ರ, ಕೊಕ್ಕನೂರು ಗ್ರಾ.ಪಂ ಯ ಜಿ.ಬೇವಿನಹಳ್ಳಿ-ಎ ಜಿ.ಬೇವಿನಹಳ್ಳಿ-ಎ, ಸಾರಥಿ ಗ್ರಾ.ಪಂ ಯ ಸಾರಥಿ-ಬಿ ಅಂಗನವಾಡಿ ಕೇಂದ್ರ, ಕೊಂಡಜ್ಜಿ ಗ್ರಾ.ಪಂ ಯ ಕೊಂಡಜ್ಜಿ-ಡಿ ಅಂಗನವಾಡಿ ಕೇಂದ್ರದಲ್ಲಿ ಇತರೆ ವರ್ಗದವರಿಗೆ ಮೀಸಲಾತಿ ಕಲ್ಪಿಸಿಲಾಗಿದೆ.

ಕೊಂಡಜ್ಜಿ ಗ್ರಾ.ಪಂ ಯ ಕೊಂಡಜ್ಜಿ-ಡಿ ಅಂಗನವಾಡಿ ಕೇಂದ್ರ, ಮಲೆಬೆನ್ನೂರು ಪುರಸಭೆ-11ನೇ ವಾರ್ಡ್ ನಲ್ಲಿ ಮಲೆಬೆನ್ನೂರು-ಸಿ ಅಂಗನವಾಡಿ ಕೇಂದ್ರದಲ್ಲಿ ಎಸ್.ಸಿ ವರ್ಗದವರಿಗೆ ಮೀಸಲಾತಿ ನೀಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ http://davanagere.nic.in/ ವೆಬ್‍ಸೈಟ್ ಭೇಟಿ ನೀಡಬಹುದೆಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

Click to comment

Leave a Reply

Your email address will not be published. Required fields are marked *

More in ಹರಿಹರ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

News

Advertisement
Advertisement e

namma davanagere

ಸಿದ್ದನೂರು ಮತ್ತು ಅಗಸನಕಟ್ಟೆಯ ನಿಕ್ರಾ ಯೋಜನೆಯ ದೃಶ್ಯಾವಳಿ

Advertisement
To Top