ಡಿವಿಜಿ ಸುದ್ದಿ , ದಾವಣಗೆರೆ: ಜಿಲ್ಲಾ ಚಿಗಟೇರಿ ಸಾರ್ವಜನಿಕ ಆಸ್ಪತ್ರೆಯ ನೂತನ ಅಧೀಕ್ಷಕರಾಗಿ ನೇಮಕಗೊಂಡಿರುವ ಡಾ. ಜಯಪ್ರಕಾಶ್ ಅವರಿಗೆ ಗೋ-ಗ್ರೀನ್ ಸಂಸ್ಥೆ ಹಾಗೂ ರೋಟರ್ಯಾಕ್ಟ್ ಸಂಸ್ಥೆಯ ವತಿಯಿಂದ ಶ್ರೀಕಾಂತ ಬಗರೆ, ಮಹಮ್ಮದ್ ಗೌಸ್, ಗಿರಿಧರ್ ಟಿ.ವಿ, ಮಾನಸ ವಿ, ಸುರೇಶ್ ಕೆ.ಎನ್, ಪ್ರವೀಣ್‌ಕುಮಾರ್ ಆರ್.ಬಿ, ಚಾಂದ್ ಮತ್ತು ಪದಾಧಿಕಾರಿಗಳು ಸನ್ಮಾನಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ದೇಶಾದ್ಯಂತ ತೀವ್ರತರವಾಗಿ ಹರಡುತ್ತಿರುವ ಕೊರೊನಾ ವೈರಸ್‌ನಿಂದ ಕಾಪಾಡಿಕೊಳ್ಳುವ ಹಾಗೂ ಮುಂಜಾಗ್ರತಾ ಕ್ರಮಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆ ಚರ್ಚಿಸಲಾಯಿತು.



