ಡಿವಿಜಿಸುದ್ದಿ.ಕಾಂ, ದಾವಣಗೆರೆ: ರಾಜ್ಯಮಟ್ಟದ ವೀರಶೈವ ಲಿಂಗಾಯತ ಮತ್ತು ಜಂಗಮ ವಧುವರರ ಸಮಾವೇಶವನ್ನು ಅ. 20 ರಂದು ಬೆಳಗ್ಗೆ 11 ಗಂಟೆಗೆ ನಗರದ ಚೇತನ ಹೋಟೆಲ್ ಮುಂಭಾಗದಲ್ಲಿರುವ ಜೆಪಿ ಫಂಕ್ಷನ್ ಹಾಲ್ ನಲ್ಲಿ ಆಯೋಜಿಸಲಾಗಿದೆ ಎಂದು ಕರ್ನಾಟಕ ವೀರಶೈವ ವಧುವರರ ಅನ್ವೇಷಣಾ ಕೇಂದ್ರದ ಅಧ್ಯಕ್ಷ ಶಿವಕುಮಾರ ಹಿರೇಮಠ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಸಮಾವೇಶದಲ್ಲಿ ವಧುವರರನ್ನು ಪರಸ್ಪರ ಪರಿಚಯಿಸಲಾಗುವುದು. ಅಪೇಕ್ಷೆ ಹೊಂದಿದವರಿಗೆ ಸ್ಥಳದಲ್ಲೇ ಮಾತುಕತೆಗೆ ಅವಕಾಶ ಕಲ್ಪಿಸಲಾಗುವುದು. ಸಮಾವೇಶದಲ್ಲಿ ಭಾಗವಹಿಸಿ ಸದಸ್ಯತ್ವ ಪಡೆದವರಿಗೆ ಮದುವೆ ನಿಶ್ಚಯದವರೆಗೆ ಮಾಹಿತಿ ನೀಡಲಾಗುವುದು. ಆಸಕ್ತರು ಈ ಅವಕಾಶ ಸದುಪಯೋಗಪಡಿಸಿಕೊಳ್ಳಬಹುದು. ಸಮಾವೇಶದಲ್ಲಿ ವೀರಶೈವ ಸಮಾಜದ ಒಳಪಂಗಡಗಳ ಸಮಾಜ ಬಾಂಧವರು ಭಾಗವಹಿಸಲಿದ್ದಾರೆ.
600 ರೂಪಾಯಿ ಶುಲ್ಕ , 2 ಭಾವಚಿತ್ರ ಹಾಗೂ ಸ್ವವಿವರವನ್ನು ಕೇಂದ್ರಕ್ಕೆ ತಲುಪಿಸಬೇಕು. ಕಳೆದ 25 ವರ್ಷದಿಂದಲೂ ಈ ವೃತ್ತಿಯಲ್ಲಿದ್ದು, ಇಲ್ಲಿಯವರೆಗೂ ಸುಮಾರು 2500 ಜೋಡಿಗಳಿಗೆ ನಮ್ಮ ಕೇಂದ್ರದಿಂದ ವಿವಾಹ ಕಾರ್ಯ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಮಲ್ಲಯ್ಯ ಹಿರೇಮಠ, ಬಸಂತ ಕುಮಾರ ಗುಡಾಳ್ ಇದ್ದರು.



