ಡಿವಿಜಿಸುದ್ದಿ.ಕಾಂ, ದಾವಣಗೆರೆ: ದಸರಾ ಮಹೋತ್ಸವದ ಅಂಗವಾಗಿ ದುರ್ಗಾಂಬಿಕಾದೇವಿ ದೇವಸ್ಥಾನ ಆಡಳಿತ ಮಂಡಳಿ ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಭಾಗಿಯಾಗಿ ನವ ಜೋಡಿಗಳಿಗೆ ಶುಭ ಹಾರೈಸಿದರು.
ದೇಗುಲ ಆಡಳಿತ ಮಂಡಳಿ ವತಿಯಿಂದ ನವ ಜೋಡಿಗಳಿಗೆ ಪಂಚೆ, ಶರ್ಟ್, ಶಲ್ಯ , ಬಂಗಾರದ ತಾಳಿ, ಎರಡು ಬೆಳ್ಳಿ ಕಾಲುಂಗರಗಳನ್ನು ಉಚಿತವಾಗಿ ನೀಡಿದರು.
೧೬ ಜೋಡಿಗಳಿಗೆ ಪುರೋಹಿತ ರೇವಣಸಿದ್ದಯ್ಯ ಶಾಸ್ತ್ರಿ ಅವರು ಮಾಂಗಲ್ಯ ಧಾರಣೆ ನಡೆಸಿಕೊಟ್ಟರು. ಹಾವೇರಿ, ದಾವಣಗೆರೆ, ಹರಿಹರ, ಹರಪನಹಳ್ಳಿ ಸೇರಿದತೆ ವಿವಿಧ ತಾಲೂಕುಗಳಿಂದ ಬಂದಿದ್ದ ವಧು-ವರರು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.

ನವ ಜೋಡಿಗಳಿಗೆ ಶುಭ ಹಾರೈಸಿದ ನಂತರ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಮಾತನಾಡಿ, ಜೀವನದಲ್ಲಿ ಸಮಸ್ಯೆಗಳು ಬರುವುದು ಸಹಜ. ಆದರೆ ಯಾವುದೇ ಸಮಸ್ಯೆ ಬರಲಿ ಒಬ್ಬರ ಮೇಲೆ ಒಬ್ಬರು ಸಿಟ್ಟು ಮಾಡಿಕೊಳ್ಳದೆ ಸುಧಾರಿಸಿಕೊಂಡು ಹೋಗಬೇಕು ಎಂದು ನವ ಜೋಡಿಗಳಿಗೆ ಕಿವಿಮಾತು ಹೇಳಿದರು.
ಮೀನಾಕ್ಷಿ ದತ್ತಾತ್ರೇಯ, ಪಿ.ರೇವಣಕರ್, ವೀಣಾ ಸುರೇಂದ್ರ ಡಿ. ರೇವಣಕರ್, ನ್ಯೂ ಎಂಜಿಎಸ್ ಜ್ಯೂಯಲರಿ, ಉಷಾ ರವೀಂದ್ರ ಡಿ. ರೇವಣಕರ್, ಸಂತೋಷ್, ಸಂದೇಶ್, ಸಂಕೇತ್, ಸುಜಲ್, ಸಂತೋಷ್ ಜಿ.ಶೇಟ್ , ಕೆಜಿಪಿ ಗೋಲ್ಡ್ ಪ್ಯಾಲೇಸ್ ಮತ್ತು ಮಹಾದೇವಿ ಸಿಲ್ಕ್, , ಎಂಜಿಎಸ್ ಜ್ಯೂಯಲರಿ ಅವರು ಸಹಾಯಧನ ನೀಡಿದ್ದರು. ದುರ್ಗಾಂಬಿಕಾ ದೇವಸ್ಥಾನ ಆಡಳಿತ ಮಂಡಳಿ ವತಿಯಿಂದ 1972 ರಿಂದ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆದುಕೊಂಡು ಬರುತ್ತಿದೆ.
ಧರ್ಮದರ್ಶಿಗಳಾದ ಹನುಮಂತರಾವ್ ಸಾವಂತ್, ಬಿ.ಎಸ್.ವೀರಭದ್ರಪ್ಪ, ಎಚ್.ವಿ.ಗೋಣಪ್ಪ,, ಉಮೇಶ್ ಸಾಲಂಕಿ, ಹನುಮಂತರಾವ್ ಜಾಧವ್ , ಗುರುರಾಜ್ ಇತರರು ಇದ್ದರು.



