Connect with us

Dvgsuddi Kannada | online news portal | Kannada news online

ದಾವಣಗೆರೆ: ಮೆಕ್ಕೆಜೋಳ ಬೆಳೆಯ 5 ಸಾವಿರ ಸಹಾಯ ಧನ ಪಡೆಯುವುದು ಹೇಗೆ ಗೊತ್ತಾ..?

ದಾವಣಗೆರೆ

ದಾವಣಗೆರೆ: ಮೆಕ್ಕೆಜೋಳ ಬೆಳೆಯ 5 ಸಾವಿರ ಸಹಾಯ ಧನ ಪಡೆಯುವುದು ಹೇಗೆ ಗೊತ್ತಾ..?

ಡಿವಿಜಿ ಸುದ್ದಿ, ದಾವಣಗೆರೆ: ದಾವಣಗೆರೆ ತಾಲ್ಲೂಕಿನಲ್ಲಿ ಮೆಕ್ಕೆಜೋಳ ಬೆಳೆದ 3,8481 ಜನ ರೈತರಿಗೆ ರೂ. 5000 ಗಳಂತೆ ಒಟ್ಟು ರೂ.192.00 ಲಕ್ಷ ಗಳನ್ನು ನೇರ ನಗದು ಮೂಲಕ ವರ್ಗಾವಣೆ ಮಾಡಲು ಅರ್ಹ ರೈತ ಫಲಾನುಭವಿಗಳನ್ನು ಗುರುತಿಸಲಾಗಿದ್ದು, ಅದರಲ್ಲಿ ಎಫ್‍ಐಡಿ ಆಗದೇ ಇರುವ 18585 ಜನ ರೈತರ ಪಟ್ಟಿಯನ್ನು ಗ್ರಾಮ ಪಂಚಾಯಿತಿಗಳ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿರುತ್ತದೆ.

ಈ ಯೋಜನೆಗೆ ರೈತರ ಎಫ್‍ಐಡಿ ನೋಂದಣಿ ಕಡ್ಡಾಯವಾಗಿದ್ದು, ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರಗಳಲ್ಲಿ ಎಫ್‍ಐಡಿ ನೋಂದಾಯಿಸಿಕೊಳ್ಳಬಹುದಾಗಿದೆ. ಜಂಟಿ ಖಾತೆ ಹೊಂದಿರುವ ಫಲಾನುಭವಿಗಳ ಪಟ್ಟಿಯನ್ನು ಸಂಬಂಧಿಸಿದ ಗ್ರಾ.ಪಂ.ಗಳ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದ್ದು, ರೈತರು ಖಾತೆಯಲ್ಲಿರುವ ಇತರ ಖಾತೆದಾರರಿಂದ ಒಪ್ಪಿಗೆ ಪತ್ರ ಪಡೆದು (ನೋಟರಿ ದೃಢೀಕರಣ), ಬ್ಯಾಂಕ್ ಪಾಸ್‍ಬುಕ್, ಆಧಾರ್ ಕಾರ್ಡ್ ಮತ್ತು ಚಾಲ್ತಿ ಪಹಣಿಯ ಪ್ರತಿಯನ್ನು ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ ಜುಲೈ 06 ರೊಳಗಾಗಿ ಸಲ್ಲಿಸಿದರೆ ಅಂತಹ ಫಲಾನುಭವಿಗಳಿಗೆ ಆರ್ಥಿಕ ನೆರವು ನೀಡಲಾಗುವುದು.

ತಂದೆ ಅಥವಾ ತಾಯಿಯ ಹೆಸರಿನಲ್ಲಿ ಜಮೀನು ಇದ್ದು, ಅವರು ಮರಣ ಹೊಂದಿದಲ್ಲಿ ಕುಟುಂಬದ ಇತರ ಸದಸ್ಯರಿಂದ ಒಪ್ಪಿಗೆ ಪತ್ರ ಪಡೆದು ಗ್ರಾಮ ಲೆಕ್ಕಾಧಿಕಾರಿಗಳಿಂದ ದೃಢೀಕರಿಸಿದ ನಂತರ ತಮ್ಮ ಹೆಸರಿನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ ಎಂದು ಕಲ್ಪಿಸಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕರಾದ ರೇವಣಸಿದ್ದನಗೌಡ ಹೆಚ್.ಕೆ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top