ಡಿವಿಜಿ ಸುದ್ದಿ, ಚನ್ನಗಿರಿ: ದಾವಣಗೆರೆ ತಾಲ್ಲೂಕಿನ ನಾಗರಕಟ್ಟೆ ಗ್ರಾಮದ ಚಂದ್ರನಾಯ್ಕ್ ಕೊಲೆ ಹಾಗೂ ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆಗಳ ಕಳ್ಳತನಕ್ಕೆ ಸಂಬಂಧಿಸಿದಂತೆ ಇಂದು ಮತ್ತೆ ಒಬ್ಬ ಬಾಲಪರಾಧಿ ಸೇರಿ 4 ಆರೋಪಿಗಳನ್ನು ಬಂಧಿಸಲಾಗಿದ್ದು, ಈ ಮೂಲಕ ಒಟ್ಟು 5 ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ 22,93,000 ರೂಪಾಯಿ ಬೆಲೆಬಾಳುವ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಈ ಬಗ್ಗೆ ಬಸವಪಟ್ಟಣ ಪೊಲೀಸ್ ಠಾಣೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಎಸ್ ಪಿ ಹನುಮಂತರಾಯ, ಈ ಎರಡು ಪ್ರಕರಣಕ್ಕೆ ಸಬಂಧಿಸಿದಂತೆ ಸಚಿನ್, ಮಂಜಾನಾಯ್ಕ್, ಕಿರಣ್ ಹಾಗೂ ಒಬ್ಬ ಬಾಲಪರಾಧಿಯನ್ನು ಇಂದು ಬಂಧಿಸಲಾಗಿದೆ. ಇದಕ್ಕೂ ಮುನ್ನ ಬಂಧಿತನಾದ ಚೇತನ್ ಸಹಿತ ಒಟ್ಟು ಐವರು ಸೇರಿಕೊಂಡು ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಲ್ಕು ಮನೆಗಳ ಕಳ್ಳತನ ಹಾಗೂ ನಾಗರಕಟ್ಟೆಯ ಯುವಕ ಚಂದ್ರನಾಯ್ಕ್ ಕೊಲೆಯ ಕೇಸ್ ನಲ್ಲಿ ಭಾಗಿಯಾದ ಆರೋಪದ ಮೇಲೆ ಬಂಧಿಸಲಾಗಿದೆ.
- ಧಾರವಾಡದಲ್ಲಿ ಕಳ್ಳತನ, ಯುವಕನ ಕೊಲೆ ಆರೋಪ
- ಒಟ್ಟು 5 ಆರೋಪಿಗಳ ಬಂಧನ
- 22.93 ಲಕ್ಷ ಮೌಲ್ಯದ ವಸ್ತು ವಶ
- ಚನ್ನಗಿರಿ ಪೊಲೀಸರ ಮಿಂಚಿನ ಕಾರ್ಯಾಚರಣೆ
ಈ ಪ್ರಕರಣಕ್ಕೆ ಸಬಂಧಿಸಿದಂತೆ ಆರೋಪಿ ಚೇತನನ್ನು ಈಗಾಗಲೇ ಬಂಧಿಸಿದ್ದು, ಇಂದು ಮತ್ತೆ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ. ಜುಲೈ10 ರಂದು ಸೊಳೆಕೆರೆ ಗುಡ್ಡದ ಮೇಲೆ ನಾಗರಕಟ್ಟೆಯ ಯುವಕ ಚಂದ್ರನಾಯ್ಕ್ ನನ್ನು ಕೊಲೆ ಮಾಡಿದ್ದರು.

ಬಂಧಿತರಿಂದ 19,70,000 ರೂಪಾಯಿ ಬೆಲೆಯ 402 ಗ್ರಾಂ ಬಂಗಾರ ಆಭರಣಗಳು, 23,000 ರೂಪಾಯಿ ಬೆಲೆಬಾಳುವ 232 ಗ್ರಾಂ ಬೆಳ್ಳಿ, 1,0000 ರೂಪಾಯಿ ಬೆಲೆ ಬಾಳುವ 02 ಲ್ಯಾಪ್ ಟಾಪ್, 10 ಸಾವಿರ ಬೆಲೆಯ ಎರಡು ವಾಚ್, 1,50 ಲಕ್ಷದ ಪಿಸ್ತೂಲ್, 05 ಜೀವಂತ ಗುಂಡು, ಕೃತ್ಯವೆಸಗಲು ಬಳಿಸದ 40 ಸಾವಿರ ಮೌಲ್ಯದ ಬೈಕ್ ಸೇರಿ ಒಟ್ಟು 22,93,000 ರೂಪಾಯಿ ವಶ ಪಡೆಯಲಾಗಿದೆ ಎಂದರು.
ಈ ಕೊಲೆಗೆ ಸಂಬಂಧಿಸಿದಂತೆ ಚಂದ್ರನಾಯ್ಕ್ ಸಹೋದರ ನಾಗರಾಜ್ ದೂರು ಕೊಟ್ಟಿದ್ದರು. ಆ ದೂರಿನ ಆಧಾರದ ಮೇಲೆ ವಿಚಾರಣೆ ನಡೆಸಿದಾಗ ಚೇತನ್ ಮೊದಲು ಪತ್ತೆಯಾಗಿದ್ದನು. ಇದಾದ ನಂತರ ಇಂದು ಮತ್ತೆ ನಾಲ್ಕು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಐದು ಜನ ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾಡಿದ ಕಳ್ಳತನ ಕೊಲೆಯಾದ ಚಂದ್ರನಾಯ್ಕ್ ಗೆ ಗೊತ್ತಿತ್ತು. ಚಂದ್ರನಾಯ್ಕ್ ತನಗೂ ಪಾಲು ನೀಡುವಂತೆ ಆಗ್ರಹಿಸಿದ್ದನ್ನು, ಇದರಿಂದ ಸ್ನೇಹಿತ ಮಧ್ಯೆ ಗಲಾಟೆಯಾಗಿ ಪಿಸ್ತೂಲ್ ನಿಂದ ಗುಂಡು ಹಾರಿಸಿ ಚಂದ್ರನಾಯ್ಕ್ ನನ್ನು ಕೊಲೆ ಮಾಡಿದ್ದರು
ಈ ಪ್ರಕರಣ ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಚನ್ನಗಿರಿ ಸಿಪಿಐ ಆರ್ ಆರ್ ಪಾಟೀಲ್, ಪಿಎಸ್ ಐ ಶಿವರುದ್ರಪ್ಪ ಎಸ್ .ಮೇಟಿ, ಪಿಎಸ್ ಐ ಚನ್ನಗಿರಿ ರೂಪ್ಲಿಬಾಯಿ, ಚನ್ನಗಿರಿ ಠಾಣಾ ಸಿಬ್ಬಂದಿಗಳಾದ ರುದ್ರೇಶ್, ಧರ್ಮಪ್ಪ, ಸತೀಶ್, ಮಹೇಶ್ ನಾಯ್ಕ್ , ಮಂಜಾನಾಯ್ಕ್ , ಬಸವರಾಜ ಕೋಟೆಪ್ಪನವರ್, ರವಿ, ರವಿಕುಮಾರ್, ನವೀನ್ ಕುಮಾರ್ ನಾಯ್ಕ್ , ಕೋಟ್ರೇಶ್ ಹಾಗೂ ವಾಹನ ಚಾಲಕರು ತಂಡದಲ್ಲಿದ್ದರು. ಚನ್ನಗಿರಿ ಭಾಗದಲ್ಲಿ ಪೊಲೀಸರು ಉತ್ತಮ ಕಾರ್ಯ ನಿರ್ವಹಿಸುತ್ತಿದ್ದು, ಈ ಪ್ರಕರಣಕ್ಕೆ ಸಬಂಧಿಸಿದಂತೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.