ಡಿವಿಜಿ ಸುದ್ದಿ, ಚನ್ನಗಿರಿ:ವಿವಾಹಕ್ಕೆ ಪೋಷಕರು ವಿರೋಧ ಹಿನ್ನೆಲೆ ಯುವಕನೋರ್ವ ಪ್ರೀತಿಸಿದ ಯುವತಿಗೆ ನಡುರಸ್ತೆಯಲ್ಲಿ ತಾಳಿ ಕಟ್ಟಿದ ಘಟನೆ ತಾಲೂಕಿನ ತಿಮ್ಲಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಯುವಕ -ಯುವತಿ ಬೇರೆ ಬೇರೆ ಜಾತಿಗೆ ಸೇರಿದ್ದರಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಹೇಮಂತ್ ಮತ್ತು ಯುವತಿ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದರು. ಮದುವೆಗೆ ಕುಟುಂಬಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
ಎರಡು ತಿಂಗಳ ಹಿಂದೆ ಹೇಮಂತ್, ಪೋಷಕರು ನೋಡಿದ ಯುವತಿಯನ್ನ ಮದುವೆ ಆಗಿದ್ದನು. ಇದೀಗ ಹೇಮಂತ್ ಪ್ರೀತಿಸಿದ ಯುವತಿಯನ್ನು ಮದುವೆ ಆಗಿದ್ದಾನೆ.ಗ್ರಾಮಕ್ಕೆ ಚನ್ನಗಿರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.