ಡಿವಿಜಿ ಸುದ್ದಿ, ಬೆಂಗಳೂರು: ನಾಳೆ ರಾಜ್ಯದಲ್ಲಿ ಮೊದಲ ಬಾರಿ ಪ್ಲಾಸ್ಮಾ ಥೆರಪಿ ನಡೆಯಲಿದೆ. ಥೆರಪಿಗೆ ದಾನಿಯೂ ಸಿಕ್ಕಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಈ ಬಗ್ಗೆ ವಿಡಿಯೋ ಸಂವಾದಲ್ಲಿ ಮಾಹಿತಿ ನೀಡಿದ ಅವರು, ರಾಜ್ಯದ ಮೊದಲ ಪ್ಲಾಸ್ಮಾ ಥೆರಪ ಇದಾಗಲಿದೆ. ಕೊರೊನಾ ಸೋಂಕು ಕಾಣಿಸಿಕೊಂಡರೆ ಆತಂಕ ಪಡುವ ಅಗತ್ಯ ಇಲ್ಲ. ಬಹಳ ಜನ ಕೊರೊನಾ ಸೋಂಕು ದೃಢಪಟ್ಟರೆ ಕಳಂಕ ಎಂದು ತಿಳಿದುಕೊಂಡಿದ್ದಾರೆ ಎಂದರು.
ಕೊರೊನಾ ಸಹ ಬೇರೆ ವೈರಸ್ ರೀತಿ ಅದು ಒಂದು ವೈರಸ್. ಸಹಜ ಜ್ವರ ಹೇಗೆ ಬರುತ್ತೋ ಅದೇ ರೀತಿ ಶೇ.97 ಕೊರೊನಾ ಸೋಂಕಿತರು ಇದ್ದರೆ. ರಾಜ್ಯದಲ್ಲಿ ಎರಡೂವರೆ ತಿಂಗಳಾದ್ರೂ 445 ಅಷ್ಟೇ ಪ್ರಕರಣಗಳ ವರದಿಯಾಗಿದೆ. ಈ ಪೈಕಿ 200 ಕ್ಕೂ ಹೆಚ್ಚು ಜನರಿಗೆ ವಾಸಿಯಾಗಿದೆ ಎಂದರು.



