ಡಿವಿಜಿ ಸುದ್ದಿ, ಮಂಗಳೂರು: ಇಡೀ ಜಗತ್ತಿನಲ್ಲಿಯೇ ಕೊರೊನಾ ವೈರಸ್ಗೆ ಮದ್ದು ಕಂಡು ಹಿಡಿಯಲು ಕಳೆದ 6 ತಿಂಗಳಿಂದ ಸತತ ಪ್ರಯತ್ನ ನಡೆಸುತ್ತಿದ್ದಾರೆ. ಆದರೂ, ಇದುವರೆಗೆ ಅಧಿಕೃತವಾಗಿ ಕೊರೊನಾ ವೈರಸ್ ಗೆ ಔಷಧಿ ಪತ್ತೆಯಾಗಿಲ್ಲ. ಆದರೆ, ಮಂಗಳೂರಿನ ಉಳ್ಳಾಲ ನಗರ ಸಭೆಯ ಕಾಂಗ್ರೆಸ್ ಕೌನ್ಸಿಲ್ ಕೊರೊನಾಗೆ ಔಷಧಿ ಕಂಡು ಹಿಡಿದ್ದಾನೆ. ಆ ಔಷಧಿ ಎಂತಹದ್ದು, ಎನ್ನುವುದನ್ನು ನೀವು ಒಮ್ಮೆ ಓದಿ..!
ಖೋಡೆಸ್ ರಮ್ ಕುಡಿದ್ರೆ ಕೊರೊನಾ ವೈರಸ್ ಬರಲ್ಲ ಎಂದು ಉಳ್ಳಾಲನಗರ ಸಭೆಯಲ್ಲಿ ಕಾಂಗ್ರೆಸ್ ಕೌನ್ಸಿಲರ್ ಹೇಳಿದ ವಿಡಿಯೋ ಸಾಮಾಜಿ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಈ ಕೌನ್ಸಿಲರ್ ವಿಡಿಯೋಗೆ ಭಾರೀ ಟೀಕೆಗೆ ವ್ಯಕ್ತವಾಗಿದೆ.
ಉಳ್ಳಾಲ ನಗರ ಸಭೆಯ ಕಾಂಗ್ರೆಸ್ ಕೌನ್ಸಿಲರ್ ರವಿಚಂದ್ರ ಗಟ್ಟಿ, ಮದ್ಯದ ಬಾಟಲಿ ಹಿಡಿದುಕೊಂಡು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು, ನಾನು ಮದ್ಯ ಕುಡಿಯಲ್ಲ ಹೇಳುತ್ತಾ, ಮದ್ಯ ಬಾಡಲಿ ಹಿಡಿದುಜ ಕೊರೊನಾ ಸೋಂಕಿತರಿಗೆ ಖೋಡೆಸ್ ರಮ್ ಕುಡಿಯಲು ಉಪದೇಶ ನೀಡಿದ್ದಾನೆ.

ಒಬ್ಬ ಜನಪ್ರತಿನಿಧಿಯಾಗಿ, ಮದ್ಯದ ಬಾಟಲಿ ಹಿಡಿದು ಮದ್ಯಪಾನ ಮಾಡಿ ಎಂದು ಪ್ರೇರೇಪಿಸಿರುವ ತಪ್ಪು ಸಂದೇಶ ರವಾನಿಸುವುದಲ್ಲದೆ, ಅಬಕಾರಿ ಕಾಯ್ದೆ ಪ್ರಕಾರ ಅಪರಾಧ. ಮಕ್ಕಳು ಈ ವೀಡಿಯೋ ನೋಡಿ ಕೊರೊನಾಕ್ಕೆ ಔಷಧವೆಂದು ಕುಡಿದರೆ ಗತಿ ಏನು ಎಂದು ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ.
ಖೋಡೆಸ್ ರಮ್ ಗೆ ಕರಿಮೆಣಸು ಪೌಡರ್ ಸೇರಿಸಿ ಕುಡಿಯುವ ಜೊತೆಗೆ ಎರಡು ಮೊಟ್ಟೆಗೆ ಕರಿಮೆಣಸು ಪುಡಿ ಸೇರಿಸಿ ಹಾಫ್ ಬಾಯ್ಲ್ಡ್ ಮಾಡಿ ರಮ್ ಜೊತೆ ಸೇವಿಸಿದರೆ ಕೊರೊನಾ ಹತ್ತಿರ ಸುಳಿಯಲ್ಲ. ನಾನು ಕುಡಿಯೋದಿಲ್ಲ, ಮೀನು ತಿನ್ನೋದಿಲ್ಲ. ಆದ್ರೆ ನಾನು ಹೇಳುವ ಮಾತು ಅನುಭವದ ಮಾತು. ಕೊರೊನಾಗೇ ಹೆದರಬೇಡಿ ಖೋಡೆಸ್ ರಮ್ ಕುಡಿಯಿರಿ ಎಂದಿದ್ದಾರೆ ಎಂದಿದ್ದಾನೆ.
ರವಿಚಂದ್ರ ಗಟ್ಟಿ ತೊಕ್ಕೊಟ್ಟಿನಲ್ಲಿ ಪಾನಕ ರವಿ ಎಂದೇ ಹೆಸರಾದವರು. ಕಳೆದ ಉಳ್ಳಾಲ ನಗರಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಟಿಕೆಟ್ ನಿರಾಕರಿಸಿದ್ದರಿಂದ ಕಾಂಗ್ರೆಸ್ ನಿಂದ ಸ್ಪರ್ಧಿಸಿ ರವಿ ಜಯ ಗಳಿಸಿದ್ದರು.



