ಡಿವಿಜಿ ಸುದ್ದಿ, ಬೆಂಗಳೂರು: ಡೆಡ್ಲಿ ಕೊರೊನಾ ರಾಜ್ಯದಲ್ಲಿಂದು ಒಂದೇ ದಿನ ಅತಿ ಹೆಚ್ಚು 34 ಪ್ರಕರಣಗಳು ಪತ್ತೆಯಾಗಿದ್ದು, ಕೊರೊನಾ ಪೀಡಿತರ ಒಟ್ಟು ಸಂಖ್ಯೆ 313ಕ್ಕೆ ಏರಿಕೆಯಾಗಿದೆ.
ಬೆಳಗಾವಿಯಲ್ಲಿ 12, ವಿಜಯಪುರದಲ್ಲಿ 7, ಬೆಂಗಳೂರು 5, ಮೈಸೂರು 3, ಕಲಬುರಗಿ, ಗದಗ್ ಜಿಲ್ಲೆಯಲ್ಲಿ ಒಂದೊಂದು ಪ್ರಕರಣ ಬೆಳಕಿಗೆ ಬಂದಿದೆ. ಇವತ್ತು ಪತ್ತೆಯಾದ ಪ್ರಕರಣಗಳ ಪೈಕಿ 17 ಮಂದಿಗೆ ದೆಹಲಿಯ ಜಮಾತ್ ನಂಟು ಹೊಂದಿದವರಾಗಿದ್ದಾರೆ.
ಕರ್ನಾಟಕದಲ್ಲಿ ನಿನ್ನೆಯಿಂದ ಇಂದು ಮಧ್ಯಾಹ್ನದವರೆಗೆ 34 ಹೊಸ #Covid19 ಪ್ರಕರಣಗಳು ಖಚಿತವಾಗಿದ್ದು, ಒಟ್ಟಾರೆ ಸೊಂಕಿತರ ಸಂಖ್ಯೆ 313ಕ್ಕೆ ಏರಿದೆ. ಇದುವರೆಗೆ 13 ಜನ ಮೃತಪಟ್ಟು, 82 ಸೋಂಕಿತರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ನಾಗರಿಕರು ಆತಂಕ ಪಡೆದೆ ಮನೆಯಲ್ಲಿಯೇ ಇರಬೇಕೆಂದು ವಿನಂತಿ#ಮನೆಯಲ್ಲೇಇರಿ pic.twitter.com/nuRhsjpbA5
— B Sriramulu (@sriramulubjp) April 16, 2020
ಇಂದು 12 ಪ್ರಕರಣಗಳೊಂದಿಗೆ ಬೆಳಗಾವಿಯಲ್ಲಿ ಕೊರೊನಾ ಪೀಡಿತರ ಸಂಖ್ಯೆ 36ಕ್ಕೆ ಏರಿಕೆಯಾಗಿದೆ. ಮೈಸೂರಿನಲ್ಲಿ 61ಕ್ಕೆ ಏರಿಕೆಯಾಗಿದ್ದು, ಬೆಂಗಳೂರಲ್ಲಿ 71 ಸೋಂಕಿತರಿದ್ದಾರೆ.



