Connect with us

Dvg Suddi-Kannada News

ರಾಜ್ಯದಲ್ಲಿ ಕೊರೊನಾ ಸೋಕಿಂತರ ಸಂಖ್ಯೆ 207ಕ್ಕೆ ಏರಿಕೆ, 10 ಹೊಸ ಪ್ರಕರಣ

ಪ್ರಮುಖ ಸುದ್ದಿ

ರಾಜ್ಯದಲ್ಲಿ ಕೊರೊನಾ ಸೋಕಿಂತರ ಸಂಖ್ಯೆ 207ಕ್ಕೆ ಏರಿಕೆ, 10 ಹೊಸ ಪ್ರಕರಣ

ಡಿವಿಜಿ ಸುದ್ದಿ, ಬೆಂಗಳೂರು: ಕೊರೊನಾ ವೈರಸ್ ರಾಜ್ಯದಲ್ಲಿ ದಿನೇ ದಿನೇ ಏರಿಕೆಯಾಗುತ್ತಿದ್ದು, ಇಂದು ಕೂಡ 10 ಹೊಸ  ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ  207ಕ್ಕೆ ಏರಿಕೆಯಾಗಿದೆ.

ಮೈಸೂರು 5, ಬೆಂಗಳೂರು 2, ಬೆಂಗಳೂರು  ಗ್ರಾಮಾಂತರ 2 ಮತ್ತು ಕಲಬುರಗಿಯಲ್ಲಿ 1 ಕೊರೊನಾ ಪ್ರಕರಣ ಪತ್ತೆಯಾಗಿದೆ. ಮೈಸೂರಿನಲ್ಲಿ ತಂದೆಯಿಂದ 8 ವರ್ಷದ ಬಾಲಕನಿಗೆ ಕೊರೊನಾ ಸೋಂಕು ತಗುಲಿದೆ. ಬೆಂಗಳೂರು ಗ್ರಾಮಾಂತರದ 11 ವರ್ಷದ ಬಾಲಕಿಗೂ ಕೊರೊನಾ ತಗುಲಿದೆ. ಈ ಬಾಲಕಿ ರೋಗಿ ನಂಬರ್ 206ರ ಪುತ್ರಿಯಾಗಿದ್ದಾಳೆ.

ಗುರುವಾರ ಬಾಗಲಕೋಟೆಯ ಮೂರು ಮಕ್ಕಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಆತಂಕ ಮೂಡಿಸಿತ್ತು. ಕೊರೊನಾ ವೈರಸ್  ತಡೆಗಾಗಿ ಸರ್ಕಾರ ಸಹ ಸೀಲ್‍ಡೌನ್ ಗೆ ಮುಂದಾಗುತ್ತಿದ್ದು, ಸೋಂಕಿತ ಪ್ರದೇಶಗಳ ರಸ್ತೆಗಳನ್ನು ಬ್ಯಾರಿಕೇಡ್ ಮೂಲಕ ಬಂದ್ ಮಾಡಲಾಗುತ್ತಿದೆ.

 

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

Advertisement
Advertisement e
Advertisement
To Top