Connect with us

Dvg Suddi-Kannada News

ಪ್ರಧಾನಿ ದೀಪ ಹಚ್ಚಿ ಕರೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಏನು ಅಂದ್ರು ಗೊತ್ತಾ..?

ಪ್ರಮುಖ ಸುದ್ದಿ

ಪ್ರಧಾನಿ ದೀಪ ಹಚ್ಚಿ ಕರೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಏನು ಅಂದ್ರು ಗೊತ್ತಾ..?

ಡಿವಿಜಿ ಸುದ್ದಿ, ಮೈಸೂರು :ಮನೆಗಳಲ್ಲಿ ದೀಪ ಬೆಳಗಿಸುವುದರಿಂದ ಕೊರೊನಾ ವೈರಸ್ ದೂರವಾಗುತ್ತಾ..?ದೀಪದಿಂದಲೇ ಈ ಮಾರಕ ಖಾಯಿಲೆ ವಾಸಿಯಾಗುವುದಾದರೆ ಆಗಲಿ ನಮ್ಮದೇನೂ ಅಭ್ಯಂತರವಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಬಗ್ಗೆ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಏ. 5 ರಂದು ಎಲ್ಲರು ದೀಪ ಹಚ್ಚಿ ಎಂದು ಪ್ರಧಾನಿ ಕರೆ ನೀಡಿದ್ದಾರೆ. ದೀಪದಿಂದಲೇ ಈ ಮಾರಕ ಖಾಯಿಲೆ ವಾಸಿಯಾಗುವುದಾದರೆ ಆಗಲಿ ನಮ್ಮದೇನೂ ಅಭ್ಯಂತರವಿಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.

ಮೈಸೂರಿನಲ್ಲಿ ಕೊರೊನಾ‌ ಸೋಂಕು ಹೇಗೆ ಹರಡಿತು ಎಂಬುದು ನಿಗೂಢವಾಗಿದೆ. ಸೋಂಕು ತಗಲು‌ ಚೀನಾ ಕಂಟೈನರ್ ಕಾರಣವಿರಬಹುದು. ಜಿಲ್ಲಾಧಿಕಾರಿಗಳು ನನಗೆ ಈ ಮಾಹಿತಿಯನ್ನೇ ನೀಡಿದ್ದಾರೆ. ಚೀನಾದಿಂದ ಬಂದ ಒಂದು ಕಂಟೈನರ್‌ರಿಂದ P52 ಕೇಸ್‌ ವ್ಯಕ್ತಿಗೆ ಸೋಂಕು ತಗುಲಿರಬಹುದು. ಈ ಬಗ್ಗೆ ಕಂಟೈನರ್ ಸ್ಯಾಂಪಲ್ ಸಹ ತೆಗೆದುಕೊಳ್ಳಲಾಗಿದೆ. ಅದನ್ನು ಲ್ಯಾಬ್‌ಗೆ ಕಳುಹಿಸಿದ್ದಾರೆ. ವರದಿ ಬಂದ ನಂತರ ನಿಖರ ಕಾರಣ ಹೊರಬರಲಿದೆ ಎಂದು ಮಾಹಿತಿ ನೀಡಿದರು

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

Advertisement
Advertisement e
Advertisement
To Top