ಡಿವಿಜಿ ಸುದ್ದಿ, ಮಂಡ್ಯ: ಇಡೀ ಜಗತ್ತನ್ನೇ ತಲ್ಲಣಗೊಳಿಸಿರುವ ಕೊರೊನಾ ವೈರಸ್ ರಾಜ್ಯದಲ್ಲಿಯೂ ತನ್ನ ಭೀಕರತೆಯನ್ನು ಮುಂದುವರಿಸುತ್ತಿದೆ. ಇದರಿಂದ ಭಯಗೊಂಡ ರೈತನೊಬ್ಬ ನೋಟನ್ನು ತೊಳೆದ ಘಟನೆ ಮಂಡ್ಯದಲ್ಲಿ ನಡೆದಿದೆ.
ಇಷ್ಟು ದಿನ ಸಕ್ಕರೆ ನಾಡು ಮಂಡ್ಯದಿಂದ ದೂರವೇ ಉಳಿದಿತ್ತು. ಆದರೆ ಈಗ ದೆಹಲಿಯ ಸಭೆಗೆ ಹೋಗಿದ್ದ ಏಳು ಜನರಿಂದ ಮಂಡ್ಯದಲ್ಲೂ ಸಹ ಕೊರೊನಾ ವೈರಸ್ ಕಂಡು ಬಂದಿದೆ. ಈ ಭಯದಿಂದ ರೈತನೊಬ್ಬ ನೋಟನ್ನು ಸೋಪಿನ ನೀರಿನಿಂದ ತೊಳೆದಿದ್ದಾನೆ.
ಮಂಡ್ಯ ತಾಲೂಕಿನ ಮಾರಚಾಕನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ನೋಟಿನಿಂದ ಕೊರೊನಾ ಹರಡುತ್ತೆ ಎಂದು ನೋಟುಗಳನ್ನು ನೀರಿನಿಂದ ರೈತ ತೊಳೆದಿದ್ದಾನೆ. ತಾನು ಬೆಳೆದ ರೇಷ್ಮೆಯನ್ನು ಮುಸ್ಲಿಂ ವ್ಯಾಪಾರಿ ಮಾರಿದ್ದನು. ಆದರೆ ಮುಸ್ಲಿಂ ವ್ಯಾಪಾರಿ ಕೊಟ್ಟ 2 ಸಾವಿರ, 500, 100ರೂ. ಮುಖ ಬೆಲೆಯ ನೋಟುಗಳನ್ನು ಸೋಪಿನ ನೀರಿನಲ್ಲಿ ತೊಳೆದಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.



