ಜೈಪುರ: ಇಡೀ ಜಗತ್ತಿನಲ್ಲಿಯೇ ತಲ್ಲಣ ಸೃಷ್ಠಿ ಮಾಡಿರುವ ಕೊರೊನಾ ವೈರಸ್ ಭಾರತದಲ್ಲಿಯೂ ಭೀತಿ ಉಂಟು ಮಾಡಿದ್ದು, ಮತ್ತೊಬ್ಬರನ್ನು ಬಲಿ ಪಡೆದಿದೆ. ಇದುವರೆಗೆ ದೇಶದಲ್ಲಿ ಕೊರೊನಾ ವೈರಸ್ ನಿಂದಾಗಿ ಪ್ರಾಣ ಕಳೆದುಕೊಂಡವರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ.
ಜೈಪುರದಲ್ಲಿ ಸಾವಿಗೀಡಾದ ವ್ಯಕ್ತಿ ಇಟಲಿ ನಿವಾಸಿ ಎಂದು ತಿಳಿಸಿದು ಬಂದಿದೆ. ಭಾರತ ಪ್ರವಾಸದಲ್ಲಿದ್ದಾಗ ಸೋಂಕು ದೃಢಪಟ್ಟ ಬಳಿಕ ಜೈಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ದೇಶದಲ್ಲಿ 206 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢವಾಗಿದೆ.



