Connect with us

Dvgsuddi Kannada | online news portal | Kannada news online

ಕೊರೊನಾ ಸೋಂಕಿತರ ಸಂಖ್ಯೆ 163ಕ್ಕೆ ಏರಿಕೆ , ಮೈಸೂರಲ್ಲಿ ಮತ್ತೆ 7 ಜನರಿಗೆ ಸೋಂಕು

ಪ್ರಮುಖ ಸುದ್ದಿ

ಕೊರೊನಾ ಸೋಂಕಿತರ ಸಂಖ್ಯೆ 163ಕ್ಕೆ ಏರಿಕೆ , ಮೈಸೂರಲ್ಲಿ ಮತ್ತೆ 7 ಜನರಿಗೆ ಸೋಂಕು

ಡಿವಿಜಿ ಸುದ್ದಿ, ಬೆಂಗಳೂರು: ರಾಜ್ಯದಲ್ಲಿ  ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಇಂದು  ರಾಜ್ಯದಲ್ಲಿ  12 ಜನರಲ್ಲಿ ಸೋಂಕು ತಗಲಿದೆ. ಈ ಮೂಲಕ  ಕೊರೊನಾ ಸೋಂಕಿತರ ಸಂಖ್ಯೆ 163ಕ್ಕೆ ಏರಿಕೆಯಾಗಿದೆ.

ಹೊಸ 12 ಸೋಂಕಿತರಲ್ಲಿ ಮೈಸೂರಿನ 7 ಜನ, ಬೆಂಗಳೂರು ಮತ್ತು ಬಾಗಲಕೋಟೆಯಲ್ಲಿ ತಲಾ ಇಬ್ಬರು ಹಾಗೂ ಬೆಂಗಳೂರಿನಲ್ಲಿ ಒಂದು ಪ್ರಕರಣ ಪತ್ತೆಯಾಗಿದೆ. ಮೈಸೂರಿನ ಏಳು ಜನ ಸೋಂಕಿತರಲ್ಲಿ ಮೂವರು ದೆಹಲಿ ಜಮಾತ್ ನಿಂದ ಬಂದವರಾಗಿದ್ದರೆ, ಮತ್ತೊಬ್ಬ ರೋಗಿ  52ನೇ ರೋಗಿಯ ಜೊತೆ ಸಂಪರ್ಕದಲ್ಲಿದ್ದರು. ಓರ್ವ ರೋಗಿ ನಂಬರ್ 104ರ ಸೋದರನಾಗಿದ್ದಾರೆ.ಇನ್ನಿಬ್ಬರು ದುಬೈನಿಂದ ಹಿಂದಿರುಗಿದ ವ್ಯಕ್ತಿಯಾಗಿದ್ದಾರೆ.

ಇನ್ನು ಬಾಗಲಕೋಟೆಯಲ್ಲಿ ಮೃತಪಟ್ಟ ವೃದ್ಧನ ಪತ್ನಿ ಮತ್ತು ಸೋದರನಿಗೆ ಕೊರೊನಾ ವೈರಸ್ ತಗುಲಿದ್ದು, ಇಬ್ಬರನ್ನು ಜಿಲ್ಲಾಸ್ಪತ್ರೆಯಲ್ಲಿ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ರಾಜ್ಯದಲ್ಲಿ ಕೊರೊನಾ ವೈರಸ್ 4 ಜನರನ್ನು ಬಲಿ ಪಡೆದುಕೊಂಡಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top