ಡಿವಿಜಿ ಸುದ್ದಿ, ಬೆಳಗಾವಿ: ಒಬ್ಬ ವ್ಯಕ್ತಿಗೆ ಎರಡು ಕಡೆ ಟೆಸ್ ಮಾಡಿಸಿದ್ದು, ಒಂದು ಕಡೆ ಕೊರೊನಾ ಪಾಸಿಟಿವ್ ಬಂದಿದ್ದರೆ, ಮತ್ತೊಂದು ಕಡೆ ನೆಗೆಟಿವ್ ಎಂದು ವರದಿ ಅಧಿಕಾರಿಗಳು ಎಡವಟ್ಟು ಮಾಡಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ಮೂಲದ ವ್ಯಕ್ತಿ ಎರಡು ಕಡೆ ಕೊರೊನಾ ಪರೀಕ್ಷೆಗೆ ಒಳಗಾಗಿದ್ದರು. ಜುಲೈ 15ರಂದು ಅಥಣಿಯಲ್ಲಿ ಹಾಗೂ ಜುಲೈ 16ರಂದು ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿದ್ದರು. ಜುಲೈ 18ರಂದು ಬೆಳಗಾವಿ ಬಿಮ್ಸ್ ಕೊರೊನಾ ನೆಗೆಟಿವ್ ರಿಪೋರ್ಟ್ ನೀಡಿ ಡಿಸ್ಚಾರ್ಜ್ ಮಾಡಿದ್ದರು. ನಿಮಗೆ ಕೊರೊನಾ ನೆಗೆಟಿವ್ ಇದೆ ಎಂದು ಹೇಳಿ ಮನೆಗೆ ಹಿಂದಿರುಗಿದ್ದರು.
ಅಥಣಿಯಲ್ಲಿ ಜುಲೈ 15ರಂದು ನೀಡಿದ್ದ ಸ್ವ್ಯಾಬ್ ರಿಪೋರ್ಟ್ ಜುಲೈ 25ರಂದು ಬಂದಿದೆ. ಜುಲೈ 25ರಂದು ಕರೆ ಮಾಡಿದ ಅಧಿಕಾರಿಗಳು ಕೊರೊನಾ ಸೋಂಕು ತಗುಲಿದೆ ಎಂದು ಹೇಳಿದ್ದಾರೆ. ಇದರಿಂದ ಗಾಬರಿಗೊಂಡ ವ್ಯಕ್ತಿ ಆಸ್ಪತ್ರೆಗೆ ತೆರಳಿದ ವ್ಯಕ್ತಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕೇವಲ ಒಂದು ದಿನದ ಅಂತರದಲ್ಲಿ ಸ್ವ್ಯಾಬ್ ಟೆಸ್ಟ್ ಮಾಡಿಸಿಕೊಂಡಿದ್ದು, ರಿಪೋರ್ಟ್ ಭಿನ್ನವಾಗಿರಲು ಹೇಗೆ ಸಾಧ್ಯ ಎಂದು ವ್ಯಕ್ತಿ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಲಾದೆ ಅಧಿಕಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.



