Connect with us

Dvgsuddi Kannada | online news portal | Kannada news online

ಒಬ್ಬ ವ್ಯಕ್ತಿ ಎರಡು ಕಡೆ ಕೊರೊನಾ ಟೆಸ್ಟ್:  ಒಂದರಲ್ಲಿ ಪಾಸಿಟಿವ್, ಮತ್ತೊಂದರಲ್ಲಿ ನೆಗೆಟಿವ್..!

ಪ್ರಮುಖ ಸುದ್ದಿ

ಒಬ್ಬ ವ್ಯಕ್ತಿ ಎರಡು ಕಡೆ ಕೊರೊನಾ ಟೆಸ್ಟ್:  ಒಂದರಲ್ಲಿ ಪಾಸಿಟಿವ್, ಮತ್ತೊಂದರಲ್ಲಿ ನೆಗೆಟಿವ್..!

ಡಿವಿಜಿ ಸುದ್ದಿ, ಬೆಳಗಾವಿ: ಒಬ್ಬ ವ್ಯಕ್ತಿಗೆ  ಎರಡು ಕಡೆ ಟೆಸ್ ಮಾಡಿಸಿದ್ದು,  ಒಂದು ಕಡೆ  ಕೊರೊನಾ ಪಾಸಿಟಿವ್ ಬಂದಿದ್ದರೆ, ಮತ್ತೊಂದು ಕಡೆ  ನೆಗೆಟಿವ್ ಎಂದು ವರದಿ ಅಧಿಕಾರಿಗಳು ಎಡವಟ್ಟು ಮಾಡಿದ್ದಾರೆ.

ಬೆಳಗಾವಿ ಜಿಲ್ಲೆಯ ಅಥಣಿ ಮೂಲದ ವ್ಯಕ್ತಿ ಎರಡು ಕಡೆ ಕೊರೊನಾ ಪರೀಕ್ಷೆಗೆ ಒಳಗಾಗಿದ್ದರು. ಜುಲೈ 15ರಂದು ಅಥಣಿಯಲ್ಲಿ ಹಾಗೂ ಜುಲೈ 16ರಂದು ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿದ್ದರು.  ಜುಲೈ 18ರಂದು ಬೆಳಗಾವಿ ಬಿಮ್ಸ್ ಕೊರೊನಾ ನೆಗೆಟಿವ್ ರಿಪೋರ್ಟ್ ನೀಡಿ  ಡಿಸ್ಚಾರ್ಜ್ ಮಾಡಿದ್ದರು.  ನಿಮಗೆ ಕೊರೊನಾ ನೆಗೆಟಿವ್ ಇದೆ ಎಂದು ಹೇಳಿ ಮನೆಗೆ ಹಿಂದಿರುಗಿದ್ದರು.

ಅಥಣಿಯಲ್ಲಿ ಜುಲೈ 15ರಂದು ನೀಡಿದ್ದ ಸ್ವ್ಯಾಬ್ ರಿಪೋರ್ಟ್ ಜುಲೈ 25ರಂದು ಬಂದಿದೆ. ಜುಲೈ 25ರಂದು ಕರೆ ಮಾಡಿದ ಅಧಿಕಾರಿಗಳು ಕೊರೊನಾ ಸೋಂಕು ತಗುಲಿದೆ ಎಂದು ಹೇಳಿದ್ದಾರೆ. ಇದರಿಂದ ಗಾಬರಿಗೊಂಡ ವ್ಯಕ್ತಿ ಆಸ್ಪತ್ರೆಗೆ ತೆರಳಿದ ವ್ಯಕ್ತಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕೇವಲ ಒಂದು ದಿನದ ಅಂತರದಲ್ಲಿ ಸ್ವ್ಯಾಬ್ ಟೆಸ್ಟ್ ಮಾಡಿಸಿಕೊಂಡಿದ್ದು, ರಿಪೋರ್ಟ್ ಭಿನ್ನವಾಗಿರಲು ಹೇಗೆ ಸಾಧ್ಯ ಎಂದು ವ್ಯಕ್ತಿ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಲಾದೆ  ಅಧಿಕಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top