ಡಿವಿಜಿ ಸುದ್ದಿ, ಬೆಂಗಳೂರು: ಇಂದು ದಿನ 9,280 ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, 116 ಮಂದಿ ಮೃತಪಟ್ಟಿದ್ದಾರೆ.
ಈ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದ್ದು, ಒಟ್ಟು ಸೋಂಕಿತರ ಸಂಖ್ಯೆ 3,79,486 ಕ್ಕೆ ಏರಿಕೆಯಾಗಿದ್ದು, ಈವರೆಗೆ 6,170 ಮಂದಿ ಮೃತಟ್ಟಿದ್ದಾರೆ. 6161 ಮಂದಿ ಇಂದು ಬಿಡುಗಡೆಯಾಗಿದ್ದು, ಈವರೆಗೆ 2,74,196 ಮಂದಿ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಇನ್ನು 99,101 ಸಕ್ರಿಯ ಪ್ರಕರಣಗಳಿವೆ.
ಬೆಂಗಳೂರಿನಲ್ಲಿ 2,963 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. 25 ಮಂದಿ ಮೃತಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 1,41,664ಕ್ಕೆ ತಲುಪಿದೆ. ಈವರೆಗೆ 2,091 ಮಂದಿ ಮೃತಪಟ್ಟಿದ್ದಾರೆ. ಮೈಸೂರಿನಲ್ಲಿ 776, ಬಳ್ಳಾರಿ 447, ದಕ್ಷಿಣ ಕನ್ನಡ 428, ತುಮಕೂರು 424, ಶಿವಮೊಗ್ಗ 350 ಹಾಸನ 340, ಧಾರವಾಡ 297, ಬೆಳಗಾವಿ 278, ದಾವಣಗೆರೆ 263, ಕಲಬುರ್ಗಿ 226, ಚಿಕ್ಕಮಗಳೂರು 223, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 206 ಪ್ರಕರಣಗಳು ಪತ್ತೆಯಾಗಿವೆ.



