Connect with us

Dvgsuddi Kannada | online news portal | Kannada news online

ರಾಜ್ಯದಲ್ಲಿ ದಾಖಲೆಯ  3,176 ಕೊರೊನಾ ಪಾಸಿಟಿವ್; 87 ಸಾವು

ಆರೋಗ್ಯ

ರಾಜ್ಯದಲ್ಲಿ ದಾಖಲೆಯ  3,176 ಕೊರೊನಾ ಪಾಸಿಟಿವ್; 87 ಸಾವು

ಡಿವಿಜಿ ಸುದ್ದಿ, ಬೆಂಗಳೂರುರಾಜ್ಯದಲ್ಲಿಂದು  ಒಂದೇ ದಿನ ಕೊರೊನಾ  3,176 ಪಾಸಿಟಿವ್  ಪ್ರಕರಣಗಳು ಪತ್ತೆಯಾಗಿವೆ. ಇದು ರಾಜ್ಯದಲ್ಲಿ ಇದುವರೆಗೆ ದಾಖಲಾದ ಅಧಿಕ ಕೊರೊನಾ ಪಾಸಿಟಿವ್ ಸಂಖ್ಯೆಯಾಗಿದೆ.

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಬಗ್ಗೆ ಮಾಹಿತಿ ನೀಡಿದೆ.  ಕೊರೊನಾ ಸೋಂಕಿನಿಂದ 87 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ಒಟ್ಟು ಮೃತಪಟ್ಟವರ ಸಂಖ್ಯೆ 928 ತಲುಪಿದೆ. ಬೆಂಗಳೂರಿನಲ್ಲಿ ಒಂದೇ ದಿನ 1,975 ಮಂದಿಗೆ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿ ಒಟ್ಟು  ಸೋಂಕಿತರ ಸಂಖ್ಯೆ 47,253ಕ್ಕೆ ಏರಿಕೆಯಾಗಿದೆ. 18,446 ಮಂದಿ ಗುಣಮುಖರಾಗಿದ್ದಾರೆ.

ರಾಜ್ಯದಲ್ಲಿ ಇನ್ನು 27,853 ಸಕ್ರಿಯ ಪ್ರಕರಣಗಳಿವೆ. ಬೆಂಗಳೂರಿನಲ್ಲಿ 17,051 ಪ್ರಕರಣಗಳಿದ್ದು, ಈವರೆಗೂ 437 ಮಂದಿ ಮೃತಪಟ್ಟಿದ್ದಾರೆ. ಇನ್ನುಳಿದಂತೆ ಧಾರವಾಡದಲ್ಲಿ 139, ಬಳ್ಳಾರಿಯಲ್ಲಿ 136, ಮೈಸೂರಿನಲ್ಲಿ 99, ವಿಜಯಪುರದಲ್ಲಿ 80 ಹಾಗೂ ದಕ್ಷಿಣ ಕನ್ನಡ 76, ದಾವಣಗೆರೆ 35 ಪಾಸಿಟಿವ್ ಕೇಸ್ ಪತ್ತೆಯಾಗಿವೆ.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಆರೋಗ್ಯ

To Top