ನವದೆಹಲಿ: ದೇಶದಾದ್ಯಂತ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹೆಚ್ಚಾಗುತ್ತಲಿದ್ದು, ಒಂದೇ ದಿನ 61,537 ಮಂದಿಯಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. 933 ಮಂದಿ ಮೃತಪಟ್ಟಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದ್ದು, ದೇಶದಲ್ಲಿ ಒಟ್ಟು 20,88,612 ಮಂದಿಗೆ ಸೋಂಕು ತಗುಲಿದ್ದು, 42,518 ಮಂದಿ ಸಾವನ್ನಪ್ಪಿದ್ದಾರೆ. ಈವರೆಗೆ 14,27,006 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ಧಾರೆ. ಸದ್ಯ ದೇಶದಲ್ಲಿ 6,19,088 ಸಕ್ರಿಯ ಪ್ರಕರಣಗಳಿವೆ. https://twitter.com/ANI/status/1291951253010833409?ref_src=twsrc%5Etfw%7Ctwcamp%5Etweetembed%7Ctwterm%5E1291951253010833409%7Ctwgr%5E&ref_url=https%3A%2F%2Fwww.prajavani.net%2Findia-news%2Fcovid-19-coronavirus-india-update-august-08-751732.html
ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು 4,90,262 ಜನರಿಗೆ ಸೋಂಕು ತಗುಲಿದೆ. 1,45,889 ಸಕ್ರಿಯ ಪ್ರಕರಣಗಳೊಂದಿಗೆ ಇದುವರೆಗೆ 3,27,281 ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟಾರೆ 17,092 ಮಂದಿ ಕೋವಿಡ್-19ನಿಂದ ಮೃತಪಟ್ಟಿದ್ದಾರೆ.
ತಮಿಳುನಾಡಿನಲ್ಲಿ ಈವರೆಗೂ 2,85,024 ಮಂದಿಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದು, 2,27,575 ಮಂದಿ ಗುಣಮುಖರಾಗಿದ್ದಾರೆ. 52,759 ಸಕ್ರಿಯ ಪ್ರಕರಣಗಳಿದ್ದು, 4,690 ಮಂದಿ ಕೊರೊನಾ ವೈರಸ್‌ನಿಂದಾಗಿ ಸಾವನ್ನಪ್ಪಿದ್ದಾರೆ.
ಆಂಧ್ರಪ್ರದೇಶದಲ್ಲಿ 2,06,960 ಜನರಿಗೆ ಸೋಂಕು ತಗುಲಿದೆ. 84,654 ಸಕ್ರಿಯ ಪ್ರಕರಣಗಳಿವೆ. 1,842 ಜನರು ಮೃತಪಟ್ಟಿದ್ದಾರೆ. ರಾಜಧಾನಿ ದೆಹಲಿಯಲ್ಲಿ 1,42,723 ಮಂದಿಗೆ ಸೋಂಕು ತಗುಲಿದೆ. ಇದುವರೆಗೆ 4,082 ಮಂದಿ ಸಾವನ್ನಪ್ಪಿದ್ದಾರೆ. ಉತ್ತರ ಪ್ರದೇಶದಲ್ಲಿ ಈವರೆಗೂ 1,13,378 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿದ್ದು, 66,834 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 44,563 ಸಕ್ರಿಯ ಪ್ರಕರಣಗಳಿದ್ದು, 1,981 ಜನರು ಮೃತಪಟ್ಟಿದ್ದಾರೆ.