ಡಿವಿಜಿ ಸುದ್ದಿ, ದಾವಣಗೆರೆ: ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿದ್ದು, ಇಂದು ಕೂಡ 197 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 3 ಸಾವಿರ ಗಡಿ ದಾಟಿದೆ.
ಜಿಲ್ಲೆಯಲ್ಲಿ ಇಂದು ಕೂಡ 97 ಮಂದಿ ಡಿಸ್ಚಾರ್ಜ್ ಆಗಿದ್ದು, ಒಟ್ಟು ಗುಣಮುಖರಾಗಿ 1, 842 ಡಿಸ್ಚಾರ್ಜ್ ಆಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 3,040 ಮಂದಿ ಒಟ್ಟು ಸೋಂಕಿತರಿದ್ದಾರೆ. ಇಂದು 8 ಮಂದಿ ಮೃತಪಟ್ಟಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 76ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಇನ್ನು 1,122 ಸಕ್ರಿಯ ಪ್ರಕರಣಗಳಿವೆ.
ಇಂದು ಪತ್ತೆಯಾದ 197 ಪಾಸಿಟಿವ್ ಕೇಸ್ ಗಳಲ್ಲಿ ದಾವಣಗೆರೆಯಲ್ಲಿ ಅಧಿಕ 146 , ಹರಿಹರ 10, ಜಗಳೂರು 10, ಚನ್ನಗಿರಿ 15, ಹೊನ್ನಾಳಿ 10, ಹೊರ ಜಿಲ್ಲೆಯ 05 ಮಂದಿಗೆ ಸೋಂಕು ತಗಲಿದೆ.
ದಾವಣಗೆರೆಯ ವಿದ್ಯಾನಗರದ 65 ವರ್ಷದ ವೃದ್ಧ, ದಾವಣಗೆರೆಯ 58 ಮಹಿಳೆ, ವೆಂಕಟೇಶ್ವರ ಕಾಲೋನಿಯ 69 ವರ್ಷದ ವೃದ್ಧ, ಎಲೆಬೇತೂರು ಗ್ರಾಮದ 70 ವರ್ಷದ ವೃದ್ಧ, ಎಚ್ ಆರ್ ಕೆ ಸರ್ಕಲ್ ನ 60 ವೃದ್ಧ , ಪಿಜೆ ಬಡಾವಣೆಯ 77 ವರ್ಷದ ವೃದ್ಧ ಹಾಗೂ ಗೌಡರ ಕೇರಿಯ 72 ವರ್ಷದ ವೃದ್ಧ ಸಾವನ್ನಪ್ಪಿದ್ದಾರೆ.



