Connect with us

Dvgsuddi Kannada | online news portal | Kannada news online

ದೇಶದಲ್ಲಿ ಒಂದೇ ದಿನ 5 ಸಾವಿರ ಕೊರೊನಾ ಪಾಸಿಟಿವ್ ಪತ್ತೆ; 1 ಲಕ್ಷ ಗಡಿ ದಾಟಿದ ಸೋಂಕಿರ ಸಂಖ್ಯೆ  

ಪ್ರಮುಖ ಸುದ್ದಿ

ದೇಶದಲ್ಲಿ ಒಂದೇ ದಿನ 5 ಸಾವಿರ ಕೊರೊನಾ ಪಾಸಿಟಿವ್ ಪತ್ತೆ; 1 ಲಕ್ಷ ಗಡಿ ದಾಟಿದ ಸೋಂಕಿರ ಸಂಖ್ಯೆ  

ನವದೆಹಲಿ: ದೇಶದಲ್ಲಿ ಕೊರೊನಾ ಅಟ್ಟಹಾಸ ಮುಂದುವರಿದಿದೆ. ಇಂದು ಒಂದೇ ದಿನ 5,609 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 1,12,359ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 137 ಮಂದಿ ಸಾವನ್ನಪ್ಪಿದ್ದಾರೆ.

ದೇಶದಲ್ಲಿ ಈವರೆಗೆ ಕೊರೊನಾ ಸೋಂಕಿಗೆ 3,435 ಮಂದಿ ಬಲಿಯಾಗಿದ್ದಾರೆ. ಒಟ್ಟು 45,310 ಮಂದಿ ಕೊರೊನಾಗೆ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. 63,624 ಸೋಂಕಿತರು ಇನ್ನೂ ಕೊರೊನಾದಿಂದ ಬಳಲುತ್ತಿದ್ದಾರೆ. ಅತೀ ಹೆಚ್ಚು ಸೋಂಕು ಹರಡಿರುವ ರಾಜ್ಯಗಳ ಪಟ್ಟಿಯಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ಈವರೆಗೆ 39,297 ಮಂದಿ ಸೋಂಕಿಗೆ ತುತ್ತಾಗಿದ್ದು, 1,390 ಮಂದಿ ಕೊರೊನಾದಿಣದ ಮೃತಪಟ್ಟಿದ್ದಾರೆ.

ಸೋಂಕು ಹರಡಿರುವ ರಾಜ್ಯಗಳಲ್ಲಿ ಎರಡನೇ ಸ್ಥಾನದಲ್ಲಿರುವ ತಮಿಳುನಾಡಿನಲ್ಲಿ ಈವರೆಗೆ 13,191 ಮಂದಿಗೆ ಕೊರೊನಾ ತಗುಲಿದ್ದು, 88 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಗುಜರಾತ್‍ನಲ್ಲಿ 12,539 ಮಂದಿ ಸೋಂಕಿಗೆ ತುತ್ತಾಗಿದ್ದು, 749 ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 11,088 ಮಂದಿ ಕೊರೊನಾಗೆ ತುತ್ತಾಗಿದ್ದು, 176 ಮಂದಿ ಮೃತಪಟ್ಟಿದ್ದಾರೆ. ಸುಮಾರು 5,192 ಮಂದಿ ಸೋಂಕಿನಿಂದ ಗುಣವಾಗಿದ್ದಾರೆ.

ಕರ್ನಾಟಕದಲ್ಲಿ ಈವರೆಗೆ 1,462 ಮಂದಿಗೆ ಸೋಂಕು ತಗುಲಿದ್ದು, ಸಾವಿನ ಸಂಖ್ಯೆ 41ಕ್ಕೆ ಏರಿದೆ. ಒಟ್ಟು 556 ಮಂದಿ ಸೋಂಕಿನಿಂದ ಗುಣಮುಖರಾಗಿ ಮನೆ ಸೇರಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಸೋಂಕಿತ ಸಂಖ್ಯೆ 250ಕ್ಕೆ ಏರಿದೆ.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top