Connect with us

Dvg Suddi-Kannada News

ಕೊರೊನಾ ಪರಿಹಾರ ನಿಧಿಗೆ ಒಂದು ವರ್ಷ ವೇತನ ನೀಡಿದ ಸಿಎಂ ಯಡಿಯೂರಪ್ಪ

ಪ್ರಮುಖ ಸುದ್ದಿ

ಕೊರೊನಾ ಪರಿಹಾರ ನಿಧಿಗೆ ಒಂದು ವರ್ಷ ವೇತನ ನೀಡಿದ ಸಿಎಂ ಯಡಿಯೂರಪ್ಪ

ಡಿವಿಜಿ ಸುದ್ದಿ, ಬೆಂಗಳೂರು: ಕೊರೊನಾ ವೈರಸ್ ತಡೆಯಲು ಸಾರ್ವಜನಿಕರು ಸಹಕರಿಸಬೇಕು ಎಂದಿರುವ  ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು, ಕೊರೊನಾ ನಿರ್ವಹಣೆಗೆ ತಮ್ಮ ಒಂದು ವರ್ಷದ ವೇತನವನ್ನು ದೇಣಿಗೆಯಾಗಿ ನೀಡಿದ್ದಾರೆ.

ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಸಿಎಂ, ಕೋವಿಡ್-19 ನಿರ್ವಹಣೆಗೆ ಒಂದು ವರ್ಷದ ವೇತನವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿರುವುದಾಗಿ ತಿಳಿಸಿದ್ದಾರೆ. ಒಂದು ವರ್ಷದ ಸುಮಾರು 24 ಲಕ್ಷ ರೂ. ವೇತನವನ್ನು ಪರಿಹಾರ ನಿಧಿಗೆ ಸಿಎಂ ದೇಣಿಗೆ ನೀಡಿದ್ದಾರೆ. ಅಲ್ಲದೆ ಶಾಸಕರು, ಸಂಸದರು ಹಾಗೂ ಅಧಿಕಾರಿಗಳಿಗೂ ಕೂಡ ತಮ್ಮ ಕೈಲಾದ ದೇಣಿಗೆ ಕೊಡುವಂತೆ ಸಿಎಂ ಕರೆ ಕೊಟ್ಟಿದ್ದಾರೆ

ಇನ್ನು 14 ದಿನಗಳ ಕಾಲ ಲಾಕ್ ಡೌನ್ ನಿಯಮ ಪಾಲನೆ ಮಾಡುವುದು ಕಡ್ಡಾಯವಾಗಿದೆ. ಯಾರೂ ಮನೆಯಿಂದ ಹೊರಬರದೇ ಕೊರೊನಾ‌ ವೈರಸ್ ತಡೆಯಬೇಕು ಎಂದು ಸಿಎಂ ಮನವಿ ಮಾಡಿದ್ದಾರೆ. ರಾಜ್ಯವು ಸೋಂಕಿತರ ಸಂಖ್ಯೆಯಲ್ಲಿ ಮೂರನೇ ಸ್ಥಾನದಿಂದ ಐದನೇ ಸ್ಥಾನಕ್ಕೆ ಬಂದಿರುವುದು ಸಂತಸವಾಗಿದೆ. ಆದರೆ ಇನ್ನೂ 14 ದಿನ ಲಾಕ್ ಡೌನ್ ನಿಯಮ ಪಾಲಿಸಬೇಕು ಎಂದರು.

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

News

Advertisement
Advertisement e

ಸಿದ್ದನೂರು ಮತ್ತು ಅಗಸನಕಟ್ಟೆಯ ನಿಕ್ರಾ ಯೋಜನೆಯ ದೃಶ್ಯಾವಳಿ

Advertisement
To Top