ಡಿವಿಜಿ ಸುದ್ದಿ, ಚನ್ನಗಿರಿ : ತಾಲೂಕಿನ ಹಿರೇಕೋಗಲೂರು ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಅಧ್ಯಕ್ಷರಾಗಿ ಎಚ್. ಯು ಮಲ್ಲಿಕಾರ್ಜುನಪ್ಪ, ಉಪಾಧ್ಯಕ್ಷರಾಗಿ ಸುವರ್ಣಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಚುನಾವಣಾಧಿಕಾರಿಯಾದ ಎನ್. ಮಲ್ಲೇಶ್ ಅವರು ಅಧ್ಯಕ್ಷರಾಗಿ ಎಚ್. ಯು. ಮಲ್ಲಿಕಾರ್ಜುನ್ ಮತ್ತು ಉಪಾಧ್ಯಕ್ಷರಾಗಿ ಸುವರ್ಣಮ್ಮ ಅವರು ಆಯ್ಕೆಯಾಗಿದ್ದಾರೆ ಎಂದು ಘೋಷಣೆ ಮಾಡಿದರು. ಎಲ್ಲಾ ಸದಸ್ಯರ ಒಮ್ಮತದಿಂದ ಅವಿರೋಧವಾಗಿ ಆಯ್ಕೆಯಾದ ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಹೆಚ್ ಆರ್ ವೀರಭದ್ರಪ್ಪ , ಬಿಜಿ ಸ್ವಾಮಿ , ಶಿವುಕುಮಾರ್ ಕೆಆರ್ .ಕೆಜಿ ಮಹಾರುದ್ರಪ್ಪ , ರವಿಕುಮಾರ್ ಕೆಜಿ , ಗುರುಮೂರ್ತಿ ಎಸ್ , ವೀಣಾಕುಮಾರಿ ಹನುಮಂತಪ್ಪ ,ಶಿವುಕುಮಾರ್ ಎಸ್ ಆರ್ , ಗೊಲ್ಲರಹಳ್ಳಿ ವೆಂಕಟೇಶ , ಕಾರ್ಯಧರ್ಶಿ ಹರೀಶ್ ಸೇರಿದಂತೆ ಗ್ರಾಮದ ಮುಖಂಡರುಗಳು ಸಂಘದ ನೂತನ ಮತ್ತು ಹಳೆಯ ಸದಸ್ಯರುಗಳು ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ಕೆಜಿ ಜಗದೀಶ್ ಗೌಡ ನಿರೂಪಿಸಿದವರು.