Connect with us

Dvgsuddi Kannada | online news portal | Kannada news online

ಅಮೂಲ್ಯ ಲಿಯೋನ್ ಗೆ  ನಕ್ಸಲ್ ಜೊತೆ ಸಂಪರ್ಕ ಇತ್ತು: ಸಿ.ಎಂ. ಯಡಿಯೂರಪ್ಪ  

ಪ್ರಮುಖ ಸುದ್ದಿ

ಅಮೂಲ್ಯ ಲಿಯೋನ್ ಗೆ  ನಕ್ಸಲ್ ಜೊತೆ ಸಂಪರ್ಕ ಇತ್ತು: ಸಿ.ಎಂ. ಯಡಿಯೂರಪ್ಪ  

ಡಿವಿಜಿ ಸುದ್ದಿ, ಮೈಸೂರುಬೆಂಗಳೂರಿನಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧದ  ಪ್ರತಿಭಟನೆಯಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿ ದೇಶ ದ್ರೋಹ ಆರೋಪ ಎದುರಿಸುತ್ತಿರುವ ಅಮೂಲ್ಯ ಲಿಯೋನ್ ನಕ್ಸಲ್  ಜತೆ ಸಂಪರ್ಕದಲ್ಲಿದ್ದಳು ಎಂದು ಈ ಹಿಂದೆ ಸಾಬೀತಾಗಿತ್ತು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಸುದ್ದಿಗಾರರೊಂದಿಗೆ  ಮಾತನಾಡಿದ ಅವರು,  ಯಾರೇ ತಪ್ಪು ಮಾಡಿದರೂ,ಅವರಿಗೆ  ಸೂಕ್ತ  ಶಿಕ್ಷೆಯಾಗಬೇಕು. ಈ ಕೃತ್ಯದ ಹಿಂದಿರುವ ಸಂಘಟನೆಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು. ರಾಜ್ಯದಲ್ಲಿ ಅಶಾಂತಿ ಉಂಟು ಮಾಡಲು  ಇಂತಹ ವ್ಯವಸ್ಥಿತ ಸಂಚುಗಳು ನಡೆಯುತ್ತಿವೆ. ತಪ್ಪು ಮಾಡಿರುವ ಸಂಘಟನೆಗಳ ಮೇಲೆ ಕ್ರಮ ಕೈಗೊಳ್ಳದಿದ್ದರೆ ಇಂತಹ ಘಟನೆಗಳು ಕೊನೆಯಾಗುವುದಿಲ್ಲ ಎಂದು ಕಿಡಿಕಾರಿದರು.

ಸಂಘಟನೆಗಳನ್ನು ಸರಿಯಾಗಿ ತನಿಖೆಗೆ ಒಳಪಡಿಸಿದರೆ ಅವಳಿಗೆ ಈ ರೀತಿ ಪ್ರೇರಣೆ ಕೊಟ್ಟಿರುವುದು ಯಾರೆಂಬುದು ಗೊತ್ತಾಗುತ್ತದೆ. ಅವಳ ಕೈಕಾಲು ಮುರಿಯಿರಿ, ಜಾಮೀನು ಸಿಗಬಾರದು. ನಾನು ಅವಳ ರಕ್ಷಣೆಗೆ ನೀಡಲ್ಲ ಎಂದು ಅವಳ ತಂದೆಯ ಹೇಳಿದ್ದಾರೆ ಎಂದು ತಿಳಿಸಿದರು.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top