ಡಿವಿಜಿ ಸುದ್ದಿ, ಚನ್ನಗಿರಿ: ತಾಲ್ಲೂಕಿನ ಯಲೋದಹಳ್ಳಿ ಹಾಲಪ್ಪ ಎಂಬುವರಿಗೆ ಸೇರಿದ 1ಲಕ್ಷ ರೂಪಾಯಿ ಮೌಲ್ಯದ ಒಂದು ಜೊತೆ ಎತ್ತುಗಳು ಕಳ್ಳತನವಾಗಿದೆ.
ಶುಕ್ರವಾರ ರಾತ್ರಿ ಎತ್ತುಗಳು ಕಳ್ಳತನವಾಗಿದ್ದು, ಬೇಸಾಯವನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದ ರೈತ ಹಾಲಪ್ಪನಿಗೆ ಸಂಕಷ್ಟ ಎದುರಾಗಿದೆ. ಕಳೆದ ಎರಡು ವರ್ಷದ ಹಿಂದೆ ಜೀವನ ನಿರ್ವಹಣೆಗಾಗಿ ಎತ್ತುಗಳನ್ನು ಹಾಲಪ್ಪ ಖರೀದಿಸಿದ್ದ. ದಿನಂ ಪ್ರತಿ ಎತ್ತುಗಳಿಂದ ಬೇಸಾಯ ನಡೆಸಿ ಜೀವನ ನಡೆಸುತ್ತಿದ್ದ.
ಕುಟುಂಬ ನಿರ್ವಹಣೆ ಬೇಸಾಯದಿಂದ ನಡೆಯುತ್ತಿತ್ತು. ಆದರೆ, ಈಗ ಯಾರೋ ಕಳ್ಳರು ನಮ್ಮ ಎತ್ತುಗಳನ್ನು ಕಳ್ಳತನ ಮಾಡಿದ್ದಾರೆ. ನಿಮ್ಮ ಸುತ್ತಮುತ್ತ ಎತ್ತುಗಳು ಸಿಕ್ಕರೆ ಸಹಾಯ ಮಾಡಿ ಎಂದು ರೈತ ಹಾಲಪ್ಪ ಕಣ್ಣಿರು ಹಾಕಿದ್ದಾರೆ. ಫೋನ್ ನಂಬರ್ : 9380300393. ಈ ಬಗ್ಗೆ ಬಸವಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.