ಡಿವಿಜಿ ಸುದ್ದಿ, ರಾಯಚೂರು: ಯಾದಗಿರಿಯ ಕಡೆಚೂರು ಕೆಐಎಡಿಬಿ ಪ್ರದೇಶದಲ್ಲಿನ ಕೆಮಿಕಲ್ ಕಾರ್ಖಾನೆಯೊಂದರಲ್ಲಿ ಗ್ಯಾಸ್ ಟ್ಯಾಂಕ್ ಸ್ಫೋಟದಿಂದ ಎಂಟು ಜನ ದಿನಗೂಲಿ ಕಾರ್ಮಿಕರಿಗೆ ಗಾಯಗಳಾಗಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹೈದರಾಬಾದ್ ಮೂಲದ ಎಸ್‍ಡಿ ಪ್ಯಾರಲೆ ಕಂಪನಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿದ್ದು, ಕೂಲಿ ಕೆಲಸ ಮಾಡುತ್ತಿದ್ದ ಆರೀಫ್, ಹುಸೇನ್ ಸೇರಿ ಮೂವರ ಸ್ಥಿತಿ ಗಂಭೀರವಾಗಿದೆ. ಇಮ್ರಾನ್, ರವಿ, ಸುಫಿಯನ್, ಶೇಕ್ ಹುಸೇನ್, ವಿಜಯ್ ಗೆ ಗಾಯಗಳಾಗಿದ್ದು ಚೇತರಿಸಿಕೊಳ್ಳುತ್ತಿದ್ದಾರೆ. ರಿಮ್ಸ್ ಆಸ್ಪತ್ರೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.
ಈ ಘಟನೆಯಿಂದ ಅವರ ಗಾಯಾಳು ಕುಟುಂಬಕ್ಕೆ ತೊಂದರೆಯಾಗಿದ್ದು, ಚಿಕಿತ್ಸೆ ವೆಚ್ಚವನ್ನು ಕಾರ್ಖಾನೆಯವರೇ ಭರಿಸಬೇಕೆಂದು ಗಾಯಳು ಕಡೆಯವರು ಆಗ್ರಹಿಸಿದ್ದಾರೆ.