Connect with us

Dvg Suddi-Kannada News

ಸ್ಯಾಂಡಲ್ ವುಡ್ ಚಲುವೆ ಮೇಘನಾ ರಾಜ್ ಗೆ ಬರ್ತ್ ಡೇ ಸಂಭ್ರಮ

ಪ್ರಮುಖ ಸುದ್ದಿ

ಸ್ಯಾಂಡಲ್ ವುಡ್ ಚಲುವೆ ಮೇಘನಾ ರಾಜ್ ಗೆ ಬರ್ತ್ ಡೇ ಸಂಭ್ರಮ

ಡಿವಿಜಿ ಸುದ್ದಿ, ಬೆಂಗಳೂರು : ರಾಜಾಹುಲಿ ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಖ್ಯಾತಿಗಳಿಸಿದ ಮೇಘನಾ ರಾಜ್, ಕನ್ನಡ ಮತ್ತು ಮಲಯಾಳಂ ಚಿತ್ರರಂಗದಲ್ಲಿ ಸಕ್ರಿಯಾಗಿರುವ ನಟಿ.

ಮೇಘನಾ ರಾಜ್ ಖ್ಯಾತ ನಟ ಸುಂದರ್ ರಾಜ್  ಮತ್ತು ಪ್ರಮೀಳಾ ಜೋಷಾಯಿ ಪುತ್ರಿ. 2018 ರಲ್ಲಿ ನಟ ಚೀರಂಜಿವಿ ಸರ್ಜಾ ಅವರನ್ನು ವಿವಾಹವಾಗಿದ್ದಾರೆ.

ಬಾಲ್ಯದಲ್ಲಿ ತಂದೆಯೊಡನೆ ನಾಟಕದಲ್ಲಿ ಅಭಿನಯಿಸಿದ್ದ ಮೇಘನಾ 2009 ರಲ್ಲಿ ತೆರಕಂಡ `ಬೆಂಡು ಅಪ್ಪಾರಾವ್ RMP’ ಚಿತ್ರದಿಂದ ನಾಯಕಿಯಾಗಿ ಸಿನಿಪಯಣ ಆರಂಭಿಸಿದರು.

1990 ರಲ್ಲಿ ಮೇ. 03 ರಂದು ಬೆಂಗಳೂರಿನಲ್ಲಿ ಜನಿಸಿದ ಮೇಘನಾ , ನಟ ಸುಂದರರಾಜ್ ಮತ್ತು ಪ್ರಮೀಳಾವರ ಏಕೈಕ ಪುತ್ರಿ. ಬಾಲ್ಡವಿನ್ ಹೈಸ್ಕೂಲ್‌ನಲ್ಲಿ ವಿಧ್ಯಾಭ್ಯಾಸ ಮುಗಿಸಿ ಕ್ರೈಸ್ತ ವಿಶ್ವವಿದ್ಯಾನಿಲಯದಿಂದ ಮನಃಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ.

2010 ರಲ್ಲಿ ತೆರೆಕಂಡ ಯೋಗೇಶ್ ಚಿತ್ರ `ಪುಂಡ’ ಮೂಲಕ ಚಂದನವನದಲ್ಲಿ ಕೂಡ ನಾಯಕಿಯಾಗಿ ಇನ್ನಿಂಗ್ಸ್ ಆರಂಭಿಸಿದರು.ಮೇಘನಾಗೆ ಸಿನಿ ಕರಿಯರ್‌ಗೆ ಬ್ರೇಕ್ ನೀಡಿದ್ದು ಮಲಯಾಳಂ ಚಿತ್ರರಂಗ. ಹಲವು ಯಶಸ್ವಿ ಮಲಯಾಳಂ ಚಿತ್ರಗಳಲ್ಲಿ ನಟಿಸಿದ ಮೇಘನಾ 2013 ರಲ್ಲಿ ತೆರೆಕಂಡ `ರಾಜಾಹುಲಿ’ ಚಿತ್ರದಿಂದ ಮತ್ತೆ ಕನ್ನಡಕ್ಕೆ ಬಂದರು. ನಂತರ `ಬಹುಪರಾಕ್’,`ಆಟಗಾರ’ ಮುಂತಾದ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ.

 

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

News

Advertisement
Advertisement e

ಸಿದ್ದನೂರು ಮತ್ತು ಅಗಸನಕಟ್ಟೆಯ ನಿಕ್ರಾ ಯೋಜನೆಯ ದೃಶ್ಯಾವಳಿ

Advertisement
To Top