Connect with us

Dvg Suddi-Kannada News

 ನಿರುದ್ಯೋಗ ಯುವಕರಿಗೆ ಉಚಿತ ಸ್ವ-ಉದ್ಯೋಗ ತರಬೇತಿ

ದಾವಣಗೆರೆ

 ನಿರುದ್ಯೋಗ ಯುವಕರಿಗೆ ಉಚಿತ ಸ್ವ-ಉದ್ಯೋಗ ತರಬೇತಿ

ಡಿವಿಜಿಸುದ್ದಿ.ಕಾಂ, ದಾವಣಗೆರೆ:

ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ವತಿಯಿಂದ ಸ್ವ-ಉದ್ಯೋಗದಲ್ಲಿ ಆಸಕ್ತರಿರುವ ದಾವಣಗೆರೆ ಜಿಲ್ಲೆಯ ನಿರುದ್ಯೋಗಿಗಳಿಗೆ ಉಚಿತವಾಗಿ ವಿವಿಧ ರೀತಿಯ ತರಬೇತಿ ನೀಡಲಿದೆ.

ಹೈನುಗಾರಿಕೆ ಮತ್ತು ಎರೆಹುಳುಗೊಬ್ಬರ ಸಾಕಾಣಿಕೆ ತರಬೇತಿ, ಪೇಪರ್ ಬ್ಯಾಗ್ ತರಬೇತಿ, ಹ್ಯಾಂಡ್ ಮೇಡ್ ಕ್ರಾಫ್ಟ್ ತರಬೇತಿ, ಎ.ಸಿ ಮತ್ತು ರೆಫ್ರೀಜಿಯೇಟರ್ ತರಬೇತಿ, ಬೇಸಿಕ್ ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ, ಸಿ.ಸಿ.ಕ್ಯಾಮೆರಾ ಮತ್ತು ಫೈಯರ್ ಸ್ಮೋಕ್ ಡಿಟೆಕ್ಟರ್ ತರಬೇತಿ ನೀಡಲಾಗುವುದು.  ತೋಳಹುಣಸೆಯ ರೇಷ್ಮೆ ಇಲಾಖೆ ಆವರಣದಲ್ಲಿರುವ ಕೆನರಾ ಬ್ಯಾಂಕ್ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ತರಬೇತಿ ನೀಡಲಾಗುವುದು.

ಈ ತರಬೇತಿಯನ್ನು ಅತ್ಯಂತ ನುರಿತ ಶಿಕ್ಷಕರಿಂದ ಪ್ರಾಯೋಗಿಕವಾಗಿ ಬೋಧಿಸಲಾಗುತ್ತದೆ. ದಾವಣಗೆರೆ ಜಿಲ್ಲೆಯ ಸ್ವಂತ ಉದ್ಯೋಗ ಆಸಕ್ತ 18 ರಿಂದ 45 ವಯೋಮಿತಿಯ ಅಭ್ಯರ್ಥಿಗಳು ತರಬೇತಿ ಪಡೆಯಬಹುದಾಗಿದಾಗಿದೆ.  ನಗರ ಮತ್ತು ಗ್ರಾಮೀಣ ಪ್ರದೇಶದ ಮಹಿಳೆಯರಿಗೆ, ಪುರುಷರಿಗೆ ಹಾಗೂ ಸ್ವ ಸಹಾಯ ಸಂಘದ ಅಭ್ಯರ್ಥಿಗಳಿಗೆ  ಮೊದಲ ಆದ್ಯತೆ ನೀಡಲಾಗುವುದು. ತರಬೇತಿಯಲ್ಲಿ ಉಚಿತ ಊಟ ಹಾಗೂ ವಸತಿ ಇರಲಿದೆ.

ಆಸಕ್ತಿಯುಳ್ಳ ನಿರುದ್ಯೋಗಿಗಳು ಅ. 15 ರಿಂದ ಸಂಸ್ಥೆಗೆ ಭೇಟಿ ನೀಡಬಹುದು. ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ಆಧಾರ್ ಕಾರ್ಡ್ ಇತ್ಯಾದಿ ದಾಖಲಾತಿಗಳೊಂದಿಗೆ ವಿಳಾಸ: ನಿರ್ದೇಶಕರು, ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ, ದಾವಣಗೆರೆ-02  ಭೇಟಿ ನೀಡಬಹುದು. ಹೆಚ್ಚಿನ ಮಾಹಿತಿಗೆ 9481977076, 7975139332, 7259731172,7829399690, 9538395817  ಸಂಪರ್ಕಿಸಿ.

 

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

News

Advertisement
Advertisement e

namma davanagere

ಸಿದ್ದನೂರು ಮತ್ತು ಅಗಸನಕಟ್ಟೆಯ ನಿಕ್ರಾ ಯೋಜನೆಯ ದೃಶ್ಯಾವಳಿ

Advertisement
To Top